ಭಟ್ಕಳ: ಆನ್‌ಲೈನ್ ಮೂಲಕ ಔಷಧ ಮಾರಾಟ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಕರೆಯ ಮೇರೆಗೆ ನಾರ್ಥ್ ಕೆನರಾ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಶನ್‌ನ ಭಟ್ಕಳ ತಾಲೂಕು ಘಟಕ ಬುಧವಾರ ಮುಷ್ಕರ ನಡೆಸಿತು.

ಭಟ್ಕಳ ನಗರ, ಗ್ರಾಮೀಣ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 36 ಔಷಧ ಅಂಗಡಿಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಔಷಧ ವ್ಯಾಪಾರಿಗಳು, ವಿತರಕರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಸಂಘಟಕರು ಆತಂಕ ವ್ಯಕ್ತಪಡಿಸಿದರು. ಗುಣಮಟ್ಟವಿಲ್ಲದ ಔಷಧಗಳ ಮಾರಾಟ ಹಾಗೂ ದರ ಪೈಪೋಟಿಯಿಂದ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ ಬೀಳುತ್ತಿದೆ ಎಂದು ದೂರಿದರು.

2020ರ ಮಾರ್ಚ್ 26 ಹಾಗೂ 2018ರ ಆಗಸ್ಟ್ 28ರಂದು ಹೊರಡಿಸಿದ ಆನ್‌ಲೈನ್ ಔಷಧ ಮಾರಾಟ ಸಂಬAಧಿತ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಕಾರ್ಪೋರೇಟ್ ಕಂಪನಿಗಳಿಗೆ ನೀಡಲಾಗುತ್ತಿರುವ ಭಾರಿ ರಿಯಾಯಿತಿ ನೀತಿಯನ್ನು ಹಿಂಪಡೆದು ಏಕರೂಪದ ರಿಯಾಯಿತಿ ದರ ಜಾರಿಗೊಳಿಸಬೇಕು. ನಕಲಿ ಹಾಗೂ ಕಲುಷಿತ ಔಷಧ ತಯಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆಗ್ರಹಿಸಿದರು.

More Stories
ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ
ಮನೆ ಕಳ್ಳತನ ಪ್ರಕರಣ: 8 ಗಂಟೆಯೊಳಗೆ ಆರೋಪಿಗಳ ಬಂಧನ
ಎಲ್ಲರ ಮೆಚ್ಚುಗೆಗೆ ಪಾತ್ರವಾದ ಬಿಬಿಎ ವಿಭಾಗದ ಬಿಜ್ ಲೀಡ್ ಎಕ್ಸ್ 2025-26 ಗ್ರ್ಯಾಂಡ್ ಫಿನಾಲೆ