ಬೆಂಗಳೂರಿನ ಓಟಗಾರರ ಸಮೂಹವು ನಗರದ ಅತ್ಯಂತ ರೋಮಾಂಚಕ ಫಿಟ್‌ನೆಸ್ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ ಪ್ರಸ್ತುತಪಡಿಸುವ ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026 ಮೇ 24, 2026 ರಂದು ಮರುಳುತ್ತಿದ್ದು, ಈಗಾಗಲೇ 6000ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಾಯಿಸಿಕೊAಡಿದ್ದಾರೆ!

ಬೆAಗಳೂರಿನ ಐತಿಹಾಸಿಕ ನೈಸ್ ರಸ್ತೆ ಮಾರ್ಗದಲ್ಲಿ ನಡೆಯಲಿರುವ ಈ ಕ್ರೀಡಾಕೂಟವು ಅಥ್ಲೀಟ್‌ಗಳು, ಫಿಟ್‌ನೆಸ್ ಪ್ರೇಮಿಗಳು, ಕಾರ್ಪೊರೇಟ್ ತಂಡಗಳು, ರನ್ನಿಂಗ್ ಕ್ಲಬ್‌ಗಳು ಮತ್ತು ಮೊದಲ ಬಾರಿಗೆ ಭಾಗವಹಿಸುತ್ತಿರುವ ಓಟಗಾರರಿಗೆ ವಿಶ್ವದರ್ಜೆಯ ಅನುಭವವನ್ನು ನೀಡಲಿದೆ. ಸ್ಪರ್ಧಿಗಳು ವೃತ್ತಿಪರ ಟೈಮಿಂಗ್ ಹೊಂದಿರುವ 21.1 ಕಿ.ಮೀ ಹಾಫ್ ಮ್ಯಾರಥಾನ್, 10 ಕಿ.ಮೀ ಮತ್ತು 5 ಕಿ.ಮೀ ಓಟದ ವಿಭಾಗಗಳನ್ನು ಆಯ್ದುಕೊಳ್ಳಬಹುದಾಗಿದೆ.

ಕಲ್ಕಿ ಸ್ಪೋರ್ಟ್ಸ್ ಇಂಡಿಯಾ ಆಯೋಜಿಸಿರುವ FBHM 2026, ಪ್ರೀಮಿಯಂ ರೇಸ್-ಡೇ ಅನುಭವವನ್ನು ನೀಡುವ ಜೊತೆಗೆ ಫಿಟ್‌ನೆಸ್, ಸಹಿಷ್ಣುತೆ ಮತ್ತು ಸಮುದಾಯದ ಮನೋಭಾವವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಈ ಈವೆಂಟ್ ಕೇವಲ ಒಂದು ಓಟದ ಸ್ಪರ್ಧೆಯಷ್ಟೇ ಅಲ್ಲದೆ, ಸಂಪೂರ್ಣ ಫಿಟ್‌ನೆಸ್ ಮತ್ತು ಜೀವನಶೈಲಿಯ ಸಂಭ್ರಮಾಚರಣೆಯಾಗಿ ಮೂಡಿಬರಲಿದೆ.
ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಟೈಮ್ಡ್ ಬಿಬ್ ಪ್ರೀಮಿಯಂ ಡ್ರೈ-ಫಿಟ್ ಟಿ-ಶರ್ಟ್, ಫಿನಿಶರ್ಸ್ ಮೆಡಲ್, ಹೈಡ್ರೇಶನ್ ಸಪೋರ್ಟ್, ವೈದ್ಯಕೀಯ ನೆರವು, ರೇಸ್ ಗುಡೀಸ್ ಮತ್ತು ಓಟದ ನಂತರದ ಉಪಹಾರ ಸೇರಿದಂತೆ ಹಲವು ಆಕರ್ಷಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ವೃತ್ತಿಪರ ಮತ್ತು ಮರೆಯಲಾಗದ ಅನುಭವವನ್ನು ಖಚಿತಪಡಿಸಲಿದೆ.
ರೇಸ್ ದಿನಕ್ಕೂ ಮುನ್ನ, ಮೇ 22 ಮತ್ತು 23, 2026 ರಂದು FBHMಎಕ್ಸ್ಪೋ 2026 ನಡೆಯಲಿದ್ದು, ಇದು ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾಗಿರಲಿದೆ. ಇಲ್ಲಿ ರನ್ನರ್‌ಗಳು ತಮ್ಮ ರೇಸ್ ಕಿಟ್‌ಗಳನ್ನು ಸಂಗ್ರಹಿಸಬಹುದು ಮತ್ತು ಕಾರ್ಯಕ್ರಮದ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.
ರೇಸ್ ದಿನದಂದು ವಾರ್ಮ್-ಅಪ್ ಸೆಷನ್‌ಗಳು, ಲೈವ್ ಸ್ಟೇಜ್ ಕಾರ್ಯಕ್ರಮಗಳು, ಮಾರ್ಗದುದ್ದಕ್ಕೂ ಮನರಂಜನೆ, ಹೈಡ್ರೇಶನ್ ಸ್ಟೇಷನ್‌ಗಳು, ವೈದ್ಯಕೀಯ ಬೆಂಬಲ, ಸ್ವಯಂಸೇವಕರ ನೆರವು ಮತ್ತು ಅತ್ಯಾಧುನಿಕ ಫಿನಿಶ್-ಲೈನ್ ಅನುಭವದೊಂದಿಗೆ ಹೈ-ಎನರ್ಜಿ ವಾತಾವರಣ ಇರಲಿದೆ.
ಎಲ್ಲಾ ಓಟಗಾರರ ಸುರಕ್ಷಿತ ಮತ್ತು ಆನಂದದಾಯಕ ಅನುಭವಕ್ಕಾಗಿ ಓಟದ ಮಾರ್ಗದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಪೋರ್ಟ್ ಪಾಯಿಂಟ್‌ಗಳು, ಡಿಸ್ಟೆನ್ಸ್ ಮಾರ್ಕರ್‌ಗಳು, ರೂಟ್ ಬ್ರ‍್ಯಾಂಡಿAಗ್ ಮತ್ತು ವಿವಿಧ ಆಕರ್ಷಣೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ದೇಶದಾದ್ಯಂತ ಕಾರ್ಪೊರೇಟ್‌ಗಳು, ಫಿಟ್‌ನೆಸ್ ಸಮುದಾಯಗಳು, ರನ್ನಿಂಗ್ ಕ್ಲಬ್‌ಗಳು ಮತ್ತು ವೈಯಕ್ತಿಕ ಓಟಗಾರರಿಂದ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ, ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026 ಬೆಂಗಳೂರಿನ ಪ್ರಮುಖ ಮತ್ತು ಹೆಮ್ಮೆಯ ಕ್ರೀಡಾಕೂಟವಾಗಿ ವೇಗವಾಗಿ ಹೊರಹೊಮ್ಮುತ್ತಿದೆ.

More Stories
ಸ್ಟಾರ್ಟ್ಅಪ್ಗಳ ಸಂಶೋಧನೆಗಳಿಗೆ ಜಾಗತಿಕ ಮಾನ್ಯತೆ ಕಲ್ಪಿಸಲು ಬೆಂಗಳೂರು ಬಯೋ ಇನ್ನೋವೇಷನ್ ಸೆಂಟರ್ ಹಾಗೂ NABL (QCI) (ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾ) ಒಪ್ಪಂದಕ್ಕೆ ಸಹಿ
ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ‘ತಿರುಪತಿ ವೆಂಕಟೇಶ್ವರ’ ದೇವಸ್ಥಾನ
ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್