May 28, 2026

ಅಥಣಿ ಸಹಕಾರಿ ರಂಗದಲ್ಲಿ ಹೊಸ ಇತಿಹಾಸ PKPS ಸೊಸೈಟಿಗಳಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸುನಿತಾ ಐಹೋಳೆ ಭೇಟಿ, ರೈತರ ಸಮಸ್ಯೆಗಳಿಗೆ ಸ್ಪಂದನೆ

ಅಥಣಿ: ಸಹಕಾರಿ ವ್ಯವಸ್ಥೆ ಗ್ರಾಮ ಮಟ್ಟದ ಕಟ್ಟಕಡೆಯ ರೈತನಿಗೂ ತಲುಪಬೇಕು ಎಂಬ ಉದ್ದೇಶದೊಂದಿಗೆ ಸುನಿತಾ ಎಸ್. ಐಹೋಳೆ ಅವರು ಅಥಣಿ ಕ್ಷೇತ್ರದಲ್ಲಿ ವಿನೂತನ ಕಾರ್ಯಚಟುವಟಿಕೆಗೆ ಚಾಲನೆ ನೀಡಿದ್ದಾರೆ. ಅಥಣಿ ಕ್ಷೇತ್ರದ ಸಹಕಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರೊಬ್ಬರು ತಳಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಾದ (PಏPS) ಸೊಸೈಟಿಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ.

ಗ್ರಾಮಗಳ ಸೊಸೈಟಿಗಳಿಗೆ ಭೇಟಿ
ಬುರ್ಲಟ್ಟಿ, ಕೋಕಟನೂರು ಹಾಗೂ ಸುಟ್ಟಟ್ಟಿ ಗ್ರಾಮಗಳ PKPS ಸೊಸೈಟಿಗಳಿಗೆ ಭೇಟಿ ನೀಡಿದ ಸುನಿತಾ ಐಹೋಳೆ ಅವರು, ಸಂಘಗಳ ಕಾರ್ಯವೈಖರಿ ಹಾಗೂ ರೈತರಿಗೆ ಸಿಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಸೊಸೈಟಿಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊAದಿಗೆ ಸಭೆ ನಡೆಸಿ, ಸಂಘಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ರೈತರ ಅಹವಾಲು ಆಲಿಕೆ
ಭೇಟಿಯ ವೇಳೆ ರೈತರು ಮತ್ತು ಸೊಸೈಟಿ ಸದಸ್ಯರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಾಯಿತು. ಕೃಷಿ ಸಾಲ ವಿತರಣೆ, ರಸಗೊಬ್ಬರ ಪೂರೈಕೆ ಹಾಗೂ ರೈತರು ಎದುರಿಸುತ್ತಿರುವ ವಿವಿಧ ತಾಂತ್ರಿಕ ಸಮಸ್ಯೆಗಳ ಕುರಿತು ಸ್ಥಳದಲ್ಲೇ ಚರ್ಚಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಜನರ ವಿಶ್ವಾಸ ಗಳಿಸಿ ಪಾರದರ್ಶಕ ಆಡಳಿತ ನಡೆಸುವುದು ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದರು.

ಭ್ರಷ್ಟಾಚಾರ ಮುಕ್ತ ಸೇವೆಗೆ ಸಂಕಲ್ಪ
ಮಾಧ್ಯಮಗಳೊAದಿಗೆ ಮಾತನಾಡಿದ ಸುನಿತಾ ಐಹೋಳೆ ಅವರು, ಸಹಕಾರಿ ವ್ಯವಸ್ಥೆ ಹಳ್ಳಿ ಹಳ್ಳಿಗೂ ತಲುಪಬೇಕು. ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಿರ್ಮಾಣ ಮಾಡಿ ರೈತರಿಗೆ ಯಾವುದೇ ವಿಳಂಬವಿಲ್ಲದೆ ತ್ವರಿತ ಸೇವೆ ಒದಗಿಸುವುದು ನಮ್ಮ ಗುರಿ. ಸದಸ್ಯರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಳಮಟ್ಟದಿಂದಲೇ ತಲುಪಿಸಲು ಸದಾ ಸಿದ್ಧಳಿದ್ದೇನೆ ಎಂದು ತಿಳಿಸಿದರು. ಸಹಕಾರಿಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಗ್ರಾಮಗಳು ಅಭಿವೃದ್ಧಿಯಾದರೆ ಕ್ಷೇತ್ರದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ನಿರ್ದೇಶಕರ ಈ ಜನಪರ ಕಾರ್ಯವೈಖರಿಗೆ ಬುರ್ಲಟ್ಟಿ, ಕೋಕಟನೂರು ಹಾಗೂ ಸುಟ್ಟಟ್ಟಿ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವರದಿ: ಮಹೇಶ್ ಶರ್ಮಾ

About The Author

error: Content is protected !!