ಚಿಕ್ಕೋಡಿ : ನಗರದಲ್ಲಿ ಇಂದು 2025-26ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅನುದಾನದಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವಿಧ ಸರ್ಕಾರಿ ಶಾಲೆಗಳಿಗೆ ಅಂದಾಜು ₹30 ಲಕ್ಷ ವೆಚ್ಚದ 12 ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಯಿತು.
ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಸದೆ Priyanka Jarkiholi ಅವರ ನೇತೃತ್ವದಲ್ಲಿ ಈ ಸ್ಮಾರ್ಟ್ ಬೋರ್ಡ್‌ಗಳನ್ನು ಶಾಲೆಗಳಿಗೆ ನೀಡಲಾಯಿತು.
ಅಥಣಿ ತಾಲೂಕಿನ ಅಬ್ದುಲ್ ಕಲಾಂ ಉರ್ದು ಪ್ರೌಢಶಾಲೆ, ಅಥಣಿ ಹಾಗೂ ಮಹಾಂತೇಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನದಿ ಇಂಗಳಗಾಂವ ಸೇರಿದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳು ಈ ಯೋಜನೆಯ ಪ್ರಯೋಜನ ಪಡೆದಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಬೋರ್ಡ್‌ಗಳ ಬಳಕೆಯಿಂದ ಪಾಠ ಬೋಧನೆ ಹೆಚ್ಚು ಪರಿಣಾಮಕಾರಿಯಾಗಲಿದ್ದು, ವಿದ್ಯಾರ್ಥಿಗಳಿಗೆ ದೃಶ್ಯಾಧಾರಿತ ಹಾಗೂ ಸಂವಾದಾತ್ಮಕ ಕಲಿಕಾ ಅನುಭವ ದೊರೆಯಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಇಂತಹ ಯೋಜನೆಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ಹೇಳಿದರು.
ವರದಿ : ಮಹೇಶ ಶರ್ಮಾ. ಬೆಳಗಾವಿ
About The Author


More Stories
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ
ವಿದ್ಯಾರ್ಥಿ ಗೌತಮ್ ಅನುಮಾನಾಸ್ಪದ ಸಾವು: ಆರೋಪಿಗಳ ಬಂಧನಕ್ಕೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಮಯಪ್ರಜ್ಞೆ: ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ