July 15, 2026

ಮದಭಾವಿ ಗ್ರಾಮದಲ್ಲಿ ಪುರಾತನ ಕಾಲದ ಥಳದೇವರು ಹಾಗೂ ದುರ್ಗದೇವಿ ಜಾತ್ರಾ ಮಹೋತ್ಸವ ಸಡಗರ-ಸಂಭ್ರಮದಿಂದ ಆಚರಣೆ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಪುರಾತನ ಕಾಲದ ಪ್ರಸಿದ್ಧ ಶ್ರೀ ಥಳದೇವರು ಹಾಗೂ ಶ್ರೀ ದುರ್ಗದೇವಿ ಜಾತ್ರಾ ಮಹೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ಸಡಗರ, ಸಂಭ್ರಮ ಹಾಗೂ ಸೌಹಾರ್ದಯುತವಾಗಿ ನೆರವೇರಿತು.

ಸಾಂಪ್ರದಾಯಿಕ ಮೆರವಣಿಗೆ ಮತ್ತು ವಿಶೇಷ ಪೂಜೆ:

ಜಾತ್ರಾ ಮಹೋತ್ಸವದ ಅಂಗವಾಗಿ ಮದಭಾವಿ ಗ್ರಾಮದ ಗೌಡರ ಮನೆಗೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಭವ್ಯ ಮೆರವಣಿಗೆಯ ಮೂಲಕ ತೆರಳಿದರು. ಅಲ್ಲಿಂದ ಮುತ್ತೈದೆಯರು ಸಾಂಪ್ರದಾಯಿಕವಾಗಿ ಉಡಿ ತುಂಬಿಕೊಂಡು, ಅಂಬಲಿ ಕೊಡ, ನೈವೇದ್ಯ ಹಾಗೂ ದೇವಿಯ ಉಡಿತುಂಬುವ ಮಂಗಳಕರ ಸಾಮಗ್ರಿಗಳನ್ನು ಭಕ್ತಿಯಿಂದ ಹೊತ್ತು ತಂದರು.
ಗ್ರಾಮದ ಪ್ರಮುಖರಾದ ಪ್ರವೀಣ ಗೌಡರು ಹಾಗೂ ಆದಿತ್ಯಗೌಡರು ಅವರನ್ನು ಭವ್ಯ ಮೆರವಣಿಗೆಯ ಮೂಲಕ ಗೌರವಾನ್ವಿತವಾಗಿ ದೇವಸ್ಥಾನಕ್ಕೆ ಕರೆತರಲಾಯಿತು. ತದನಂತರ, ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮತ್ತು ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸರಣಿ ಪೂಜಾ ಕಾರ್ಯಕ್ರಮಗಳ ನಂತರ ಗ್ರಾಮದ ಜನರಿಂದ ದೇವಿಗೆ ನೈವೇದ್ಯ ಸಮರ್ಪಣೆ ಹಾಗೂ ಸಾರ್ವಜನಿಕ ಅನ್ನಪ್ರಸಾದ ಸೇವೆ (ಮಹಾಪ್ರಸಾದ) ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

ಗ್ರಾಮದ ಸಾಂಸ್ಕೃತಿಕ ಮತ್ತು ಧಾರ್ಮಿಕ ಐಕ್ಯತೆಗೆ ಸಾಕ್ಷಿಯಾದ ಈ ಭವ್ಯ ಮಹೋತ್ಸವದಲ್ಲಿ ದಲಿತ ಮುಖಂಡರಾದ ರಮೇಶ ಕಾಂಬಳೆ, ರಾವಸಾಬ ಕಾಂಬಳೆ, ಸುನಿಲ ಕಾಂಬಳೆ, ಜಯಪ್ಪಾ ಕಾಂಬಳೆ, ಸಾಗರ ಕಾಂಬಳೆ, ಪರಶುರಾಮ ಕಾಂಬಳೆ, ತಾನಾಜಿ ಕಾಂಬಳೆ, ಸಹದೇವ ಕಾಂಬಳೆ, ಶೇಖರ ಕಾಂಬಳೆ, ಪುಟ್ಟು ಕಾಂಬಳೆ, ಪ್ರದೀಪ ಕಾಂಬಳೆ, ಸತ್ಯಪ್ಪಾ ಕಾಂಬಳೆ, ಹನುಮಂತ ಕಾಂಬಳೆ, ಅಮೃತ ಕಾಂಬಳೆ ಹಾಗೂ ವಿಶ್ವಾಸ ಕಾಂಬಳೆ ಸೇರಿದಂತೆ ಹಿರಿಯರು, ಯುವಕರು ಮತ್ತು ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

About The Author

error: Content is protected !!