ಭಟ್ಕಳ: ಬೆಳಗಾವಿಯ ಬ್ಲೂಮಿಂಗ್ ಬಡ್ಸ್ ಶಾಲೆಯಲ್ಲಿ ಜುಲೈ 22 ಮತ್ತು 23ರಂದು ನಡೆದ ಸಿಐಎಸ್‌ಸಿಇ (CISCE) ವಲಯ ಮಟ್ಟದ ಅಥ್ಲೆಟಿಕ್ಸ್ ಹಾಗೂ ಕ್ರೀಡಾಕೂಟದಲ್ಲಿ ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಭರ್ಜರಿ ಸಾಧನೆ ಮಾಡುವ ಮೂಲಕ ಶಾಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಒಟ್ಟು 10 ಚಿನ್ನ, 6 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ವಿದ್ಯಾಂಜಲಿ ಶಾಲೆಯ ಕ್ರೀಡಾಪಟುಗಳು ತಮ್ಮ ಮೇಲುಗೈ ಸಾಧಿಸಿದ್ದಾರೆ.
ಸಾಧಕರ ವಿವರ
17 ವರ್ಷದೊಳಗಿನ ಬಾಲಕರ ವಿಭಾಗ, ಚಿನ್ನದ ಪದಕ:ವಿಜೇತ್ (10ನೇ ತರಗತಿ): 3000 ಮೀ. ಓಟ, ನಿತೀನ್: 800 ಮೀ. ಓಟ, ತುಷಾರ್ (9ನೇ ತರಗತಿ): ಶಾಟ್‌ಪುಟ್ ಮತ್ತು ಹ್ಯಾಮರ್ ತ್ರೋ (ದ್ವಿಚಿನ್ನ)
ತಂಡದ ವಿಭಾಗ: 4×400 ಮೀ. ರಿಲೇ, ವಾಲಿಬಾಲ್ ಹಾಗೂ ಕಬಡ್ಡಿ ತಂಡಗಳು (ಪ್ರಥಮ ಸ್ಥಾನ)
ಬೆಳ್ಳಿ ಪದಕ: ಲತೀನ್ (1500 ಮೀ. ಓಟ), ಕೌಶಿಕ್ (800 ಮೀ. ಓಟ), ಶರತ್ (400 ಮೀ. ಓಟ), ತುಷಾರ್ (ಡಿಸ್ಕಸ್ ತ್ರೋ) ಹಾಗೂ ಸಮೀರ್ (ಜಾವೆಲಿನ್ ತ್ರೋ).
ಕಂಚಿನ ಪದಕ: ರಾಘವೇಂದ್ರ (3000 ಮೀ. ಓಟ), ಶರತ್ (100 ಮೀ. ಓಟ) ಹಾಗೂ ನಿತೀನ್ (ಜಾವೆಲಿನ್ ತ್ರೋ).

14 ವರ್ಷದೊಳಗಿನ ಬಾಲಕರ ವಿಭಾಗ
ಚಿನ್ನದ ಪದಕ: ಕಿಶನ್: 200 ಮೀ. ಓಟ ಹಾಗೂ ಲಾಂಗ್ ಜಂಪ್ (ದ್ವಿಚಿನ್ನ) ಕಬಡ್ಡಿ ತಂಡ: ಪ್ರಥಮ ಸ್ಥಾನ (ಚಿನ್ನ), ಬೆಳ್ಳಿ ಪದಕ: ಕಿಶನ್: 400 ಮೀ. ಓಟ,
ಅಭಿನಂದನೆ ಮತ್ತು ಶ್ಲಾಘನೆ
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ ವಿಜೇತರನ್ನು ಅಭಿನಂದಿಸಿದ್ದಾರೆ. ಕ್ರೀಡಾಪಟುಗಳ ನಿರಂತರ ಶ್ರಮಕ್ಕೆ ಬೆಂಬಲ ನೀಡಿದ ಪೋಷಕರಿಗೆ ಧನ್ಯವಾದ ತಿಳಿಸಿರುವ ಆಡಳಿತ ಮಂಡಳಿಯು, ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ವಸಂತ ಬೆಂಡವಾಡಿ ಹಾಗೂ ತರಬೇತುದಾರರ ತಂಡದ ಮಾರ್ಗದರ್ಶನವನ್ನು ವಿಶೇಷವಾಗಿ ಶ್ಲಾಘಿಸಿದೆ.
ಈ ಕೂಟದಲ್ಲಿ ಜಯಗಳಿಸಿದ ಹಲವು ವಿದ್ಯಾರ್ಥಿಗಳು ಮುಂದಿನ ಹಂತದ (ರಾಜ್ಯ/ರಾಷ್ಟ್ರೀಯ) ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
About The Author


More Stories
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ
ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು
ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ