ಭಟ್ಕಳ: ತಾಲೂಕಿನ ಸರ್ಪನಕಟ್ಟೆ ಸಮೀಪದ ಸೋಡಿಗದ್ದೆ ಕ್ರಾಸ್‌ನಲ್ಲಿ ಈರಪ್ಪ ನಾಯ್ಕ್ ಗರ್ಡಿಕರ್ ಒಡೆತನದ ‘ಎಂ.ಜಿ.ಎಂ ಪೆಟ್ರೋಲಿಯಂ’ (MGM Petroleum) ಹೆಸರಿನ ಇಂಡಿಯನ್ ಆಯಿಲ್ ಕಂಪನಿಯ ನೂತನ ಪೆಟ್ರೋಲ್ ಬಂಕ್ ಅನ್ನು ಮಾಜಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಇದು ಭಟ್ಕಳದಲ್ಲಿ ಕಾರ್ಯಾರಂಭ ಮಾಡುತ್ತಿರುವ ಇಂಡಿಯನ್ ಆಯಿಲ್ ಸಂಸ್ಥೆಯ 4ನೇ ಚಿಲ್ಲರೆ ಮಾರಾಟ ಮಳಿಗೆಯಾಗಿದೆ.

ಗ್ರಾಮೀಣ ಭಾಗದ ಜನರಿಗೆ ಅನುಕೂಲ: ಮಂಕಾಳ ವೈದ್ಯ
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಮಂಕಾಳ ವೈದ್ಯ, “ಗ್ರಾಮೀಣ ಭಾಗದ ಜನರಿಗೆ ಅತ್ಯುತ್ತಮ ಗುಣಮಟ್ಟದ ಇಂಧನ ಸೇವೆ ಸ್ಥಳೀಯವಾಗಿಯೇ ಲಭ್ಯವಾಗುತ್ತಿರುವುದು ಸಂತಸದ ವಿಷಯ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ವಾಹನ ಸವಾರರು, ರೈತರು ಹಾಗೂ ಸಾರ್ವಜನಿಕರು ಇಂಧನಕ್ಕಾಗಿ ಭಟ್ಕಳ ಪಟ್ಟಣಕ್ಕಾಗಲಿ ಅಥವಾ ಶಿರೂರಿಗಾಗಲಿ ಅಲೆಯುವುದು ತಪ್ಪಲಿದ್ದು, ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ,” ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸೌಲಭ್ಯಗಳ ಮಳಿಗೆ
ನೂತನ ಪೆಟ್ರೋಲ್ ಬಂಕ್ ಅತ್ಯಾಧುನಿಕ ಸೌಲಭ್ಯಗಳು, ಆಕರ್ಷಕ ವಿನ್ಯಾಸ ಹಾಗೂ ಸುಂದರ ಬೆಳಕಿನ ವ್ಯವಸ್ಥೆಯೊಂದಿಗೆ ನಿರ್ಮಾಣಗೊಂಡಿದ್ದು, ದೂರದಿಂದಲೇ ಗಮನ ಸೆಳೆಯುತ್ತಿದೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಂಕಾಳ ವೈದ್ಯ ಅವರನ್ನು ಶಾಲಾ-ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ನಾಯ್ಕ್, ವೆಂಕಟೇಶ ನಾಯ್ಕ ಗೊರಟೆ, ಭಾಸ್ಕರ ಮೊಗೇರ ಬೆಳ್ಕೆ, ಜ್ಯೋತಿ ಈರಪ್ಪ ನಾಯ್ಕ್ ಗರ್ಡಿಕರ್ ಹಾಗೂ ಗರ್ಡಿಕರ್ ಕುಟುಂಬದ ಸದಸ್ಯರು ಸೇರಿದಂತೆ ಹಲವು ಪ್ರಮುಖರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

About The Author


More Stories
AITM ಭಟ್ಕಳದಲ್ಲಿ IPR ಮತ್ತು ಪೇಟೆಂಟ್ಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್ಲೈನ್ ಕಾರ್ಯಾಗಾರ
ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು
ಯಶಸ್ವಿಯಾಗಿ ನಡೆದ ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ: ಜನತಾ ವಿದ್ಯಾಲಯ ಸಮಗ್ರ ವೀರಾಗ್ರಣಿ