August 22, 2026

ಗುಂಡ್ಲುಪೇಟೆ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಮಾಧ್ಯಮ ಪ್ರತಿನಿಧಿ ಶ್ರೀಮತಿ ತಾರಾ ನಾಗೇಂದ್ರ ಅವರಿಗೆ ಗೌರವ ಸನ್ಮಾನ

ಗುಂಡ್ಲುಪೇಟೆ: ಪಟ್ಟಣದ ಪುರಸಭಾ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆಯ ಮುಖ್ಯ ಅಧಿಕಾರಿ ಎಸ್. ಸರವಣ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ಪುರಸಭೆಯ ವತಿಯಿಂದ ‘ಸುದ್ದಿ ಗುಂಡ್ಲುಪೇಟೆ’ಯ ವರದಿಗಾರ್ತಿ ಶ್ರೀಮತಿ ತಾರಾ ನಾಗೇಂದ್ರ ಅವರಿಗೆ ಆತ್ಮೀಯ ಗೌರವ ಸನ್ಮಾನ ನೆರವೇರಿಸಲಾಯಿತು.

ಜನಜಾಗೃತಿಗೆ ಮಾಧ್ಯಮದ ಸೇವೆ ಶ್ಲಾಘನೀಯ:

ಸನ್ಮಾನ ನೆರವೇರಿಸಿ ಮಾತನಾಡಿದ ಪುರಸಭೆಯ ಮುಖ್ಯ ಅಧಿಕಾರಿ ಎಸ್. ಸರವಣ ಅವರು,

“ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾರ್ವಜನಿಕ ಜನಜಾಗೃತಿ ಕಾರ್ಯಕ್ರಮಗಳು ತಳಮಟ್ಟದ ಜನರಿಗೆ ತಲುಪುವಲ್ಲಿ ತಾರಾ ನಾಗೇಂದ್ರ ಅವರ ಕೊಡುಗೆ ದೊಡ್ಡದಾಗಿದೆ. ಕಳೆದ ಎರಡು ವರ್ಷಗಳಿಂದ ಅವರು ನೀಡುತ್ತಿರುವ ಆಡಿಯೋ ಜಿಂಗಲ್ ಸೇವೆ ಪುರಸಭೆ ಹಾಗೂ ಸಾರ್ವಜನಿಕರ ನಡುವೆ ದೊಡ್ಡ ಸೇತುವೆಯಾಗಿ ಕೆಲಸ ಮಾಡಿದೆ. ಅವರ ಈ ನಿರಂತರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ನಮ್ಮ ಪುರಸಭೆಗೆ ಹೆಮ್ಮೆಯ ವಿಷಯ,” ಎಂದು ಅಭಿನಂದಿಸಿದರು.

ಸಮಾರಂಭದಲ್ಲಿ ಪುರಸಭೆಯ ಸಿಬ್ಬಂದಿ ವರ್ಗದವರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವರದಿ : ಸದಾನಂದ ಕನ್ನೇಗಾಲ ಗುಂಡ್ಲಪೇಟೆ

About The Author

error: Content is protected !!