ಭಟ್ಕಳ: ನೂಲು ಹುಣ್ಣಿಮೆ (ಉಪಾಕರ್ಮ) ಅಂಗವಾಗಿ ಪಟ್ಟಣದ ನೆಹರೂ ರಸ್ತೆಯಲ್ಲಿರುವ ಶ್ರೀ ಕಾಮಾಕ್ಷಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಯಜ್ಞೋಪವೀತ ಧಾರಣೆ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮದಿಂದ ನೆರವೇರಿತು.
ಧಾರ್ಮಿಕ ವಿಧಿವಿಧಾನಗಳು: ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ವೇ.ಮೂ. ವಿನೋದ ಭಟ್ ಅವರ ನೇತೃತ್ವದಲ್ಲಿ ಹೋಮಹವನಗಳು ನಡೆಯಿತು. ವೈದಿಕರ ಉಪಸ್ಥಿತಿಯಲ್ಲಿ ಬ್ರಹ್ಮಚಾರಿ ವಟುಗಳು ಹಾಗೂ ಸ್ಥಳೀಯರು ಹೊಸ ಯಜ್ಞೋಪವೀತ (ಜನಿವಾರ) ಧಾರಣೆ ಮಾಡಿದರು.
ವಿವಿಧ ದೇವಾಲಯಗಳಲ್ಲಿ ಆಚರಣೆ: ಪಟ್ಟಣದ ವಡೇರ ಮಠ, ಕಾಶಿ ಮಠ, ತಿರುಮಲ ದೇವಸ್ಥಾನ ಹಾಗೂ ಮುರ್ಡೇಶ್ವರದ ವೆಂಕಟರಮಣ ದೇವಸ್ಥಾನ ಸೇರಿದಂತೆ ಗ್ರಾಮೀಣ ಭಾಗದ ಹಲವು ದೇವಸ್ಥಾನಗಳಲ್ಲಿ ನೂಲು ಹುಣ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವಟುಗಳ ಭಾಗಿ: ಹೋಮ ಕಾರ್ಯದಲ್ಲಿ ಶಾಂತಕೃಷ್ಣ ಭಟ್, ಪ್ರತೀತ್ ಕಿಣಿ, ಅಮೋಘ ನಾಯ್ಕ, ಶಶಾಂಕ್ ಶ್ಯಾನಭಾಗ, ಕೇದಾರ ಶ್ಯಾನಭಾಗ ಹಾಗೂ ಕಾರ್ತಿಕ ಶ್ಯಾನಭಾಗ ಪಾಲ್ಗೊಂಡು ಯಜ್ಞೋಪವೀತ ಧರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ಪುರಸಭೆ ಮುಖ್ಯಾಧಿಕಾರಿ ಅಜಯ ಭಂಡಾರಕರ್, ಗೋಪಾಲ ಪೈ, ನಾಗೇಶ ಪೈ, ಆನಂದ ಕಿಣಿ, ರಘುವೀರ ಬಾಳಗಿ, ಕಿರಣ ಶ್ಯಾನಭಾಗ, ಪುಂಡಲೀಕ ಪೈ, ಸುಧೀಂದ್ರ ಶ್ಯಾನಭಾಗ, ದೇವಸ್ಥಾನದ ಮ್ಯಾನೇಜರ್ ನಂದು ಕಾಮಕರ್ ಹಾಗೂ ಗಣಪತಿ ಭಟ್, ನಾಗೇಶ ಪುರಾಣಿಕ, ವಿನಾಯಕ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ