September 8, 2026

ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ಅಕ್ರಮ ಮರಳು ಸಾಗಾಟಕ್ಕೆ ಬಿಸಿ ಮುಟ್ಟಿಸಿದ ಎಎಸ್‌ಪಿ ರಾನು ಗುಪ್ತ: 6 ಟಿಪ್ಪರ್‌ಗಳು, 6 ಮಂದಿ ವಶಕ್ಕೆ

ಭಟ್ಕಳ: ನೂತನ ಎಎಸ್‌ಪಿ ರಾನು ಗುಪ್ತ (ಐಪಿಎಸ್) ಅವರು ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲೇ ಮಂಕಿ ಹಾಗೂ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟದ ವಿರುದ್ಧ ಮಿಂಚಿನ ದಾಳಿ ನಡೆಸಿ 6 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು, 6 ಮಂದಿಯನ್ನು ಬಂಧಿಸಿದ್ದಾರೆ.

ಮಿಂಚಿನ ಕಾರ್ಯಾಚರಣೆ: ಸೆಪ್ಟೆಂಬರ್ 1ರ ರಾತ್ರಿ 11 ರಿಂದ ಸೆಪ್ಟೆಂಬರ್ 2ರ ಬೆಳಗಿನ ಜಾವ 3 ಗಂಟೆಯವರೆಗೆ ಎಎಸ್‌ಪಿ ರಾನು ಗುಪ್ತ ಅವರ ನೇರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಯಿತು.

ಮಂಕಿ ಠಾಣಾ ವ್ಯಾಪ್ತಿ: KA-35/A-6189, KA-20/H-6405 ಮತ್ತು KA-47/A-4658 ನೋಂದಣಿ ಸಂಖ್ಯೆಯ 3 ಟಿಪ್ಪರ್‌ಗಳು.

ಮುರುಡೇಶ್ವರ ಠಾಣಾ ವ್ಯಾಪ್ತಿ: KA-47/7250, GA-05/T-0502 ಮತ್ತು KA-47/1412 ನೋಂದಣಿ ಸಂಖ್ಯೆಯ 3 ಟಿಪ್ಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ

ಮಂಕಿ ಅನಂತವಾಡಿಯ ಹರೀಶ ವಿಷ್ಣು ನಾಯ್ಕ, ಮಂಕಿ ಚಿತ್ತಾರದ ಅಜೀತ ಸುರೇಶ ನಾಯ್ಕ, ಹೊನ್ನಾವರ ಬಳ್ಕೂರಿನ ಆನಂದ ಅಣ್ಣಪ್ಪ ನಾಯ್ಕ, ಕಾಸರಕೋಡಿನ ಪ್ರಕಾಶ ಶ್ರೀನಿವಾಸ ಪುರಾಣಿಕ, ಬಳ್ಕೂರಿನ ಮಾರುತಿ ಶ್ರೀಧರ ನಾಯ್ಕ ಹಾಗೂ ಗೇರುಸೊಪ್ಪಾದ ನಜೀರ್ ಮಹ್ಮದ್ ಮೈದಿನ್‌ಕುಟ್ಟಿ ಅವರನ್ನು ವಶಕ್ಕೆ ಪಡೆಯಲಾಗಿದೆ.

    ಮಂಕಿ ಮತ್ತು ಮುರುಡೇಶ್ವರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಎಎಸ್‌ಪಿ ಅವರ ಈ ಪ್ರಥಮ ಕಾರ್ಯಾಚರಣೆಯು ತಾಲೂಕಿನ ಅಕ್ರಮ ದಂಧೆಕೋರರಲ್ಲಿ ತೀವ್ರ ಆತಂಕ ಮೂಡಿಸಿದೆ.

    About The Author

    error: Content is protected !!