September 8, 2026

ಜಾಲಿಯಲ್ಲಿ ‘ಕೃಷ್ಣ ಲೀಲಾ–02’: ಪುಟಾಣಿಗಳ ಕೃಷ್ಣ ವೇಷಧಾರಿ ಸ್ಪರ್ಧೆ ಹಾಗೂ ₹30 ಸಾವಿರಕ್ಕೂ ಅಧಿಕ ಬಹುಮಾನ ವಿತರಣೆ

ಭಟ್ಕಳ: ತಾಲೂಕಿನ ಜಾಲಿ ಗ್ರಾಮದ ನಾಮಧಾರಿ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ (ರಿ.) ವತಿಯಿಂದ ‘ಕೃಷ್ಣ ಲೀಲಾ–02’ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಸ್ಪರ್ಧೆಗಳು ಹಾಗೂ ಬಹುಮಾನ: ಯಾವುದೇ ನೋಂದಣಿ ಶುಲ್ಕವಿಲ್ಲದೆ ಪುಟಾಣಿಗಳಿಗೆ ಕೃಷ್ಣ ವೇಷಧಾರಿ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ಚುಕ್ಕೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ₹30 ಸಾವಿರಕ್ಕೂ ಅಧಿಕ ಮೊತ್ತದ ಬಹುಮಾನ ವಿತರಿಸಲಾಯಿತು.

ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ (ಜಾಲಿ) ಅಧ್ಯಕ್ಷ ಮಂಜಪ್ಪ ಎಂ. ನಾಯ್ಕ ಕಾರ್ಯಕ್ರಮ ಉದ್ಘಾಟించి, ಫೌಂಡೇಶನ್‌ನ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದರು. ಫೌಂಡೇಶನ್ ಅಧ್ಯಕ್ಷ ವಸಂತ್ ಎಂ. ನಾಯ್ಕ ಸಂಸ್ಥೆಯ ಜನಪರ ಚಟುವಟಿಕೆಗಳ ಕುರಿತು ಮಾತನಾಡಿದರೆ, ಕಾರ್ಯದರ್ಶಿ ಮಾರುತಿ ನಾಯ್ಕ ಜಾಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಗೌರವ ಡಾಕ್ಟರೇಟ್ ಪಡೆದ ಡಾ. ಗೋವಿಂದ ಗುರೂಜಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಶ್ವಂತ್ ನಾಯ್ಕ (ಬಬ್ಬನಕಲ್ ಶಾಲೆ) ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಬ್ರಹ್ಮರ್ಷಿ ನಾರಾಯಣ ಗುರು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ರಮೇಶ್ ಎನ್. ಖಾರ್ವಿ, ಮಹಿಳಾ ಪ್ರಮುಖರಾದ ಪದ್ಮಾವತಿ ಎಂ. ಗೊಂಡ, ಚಂದ್ರಹಾಸ ನಾಯ್ಕ ಹಾಗೂ ಸುಗುಣ ಸಿ. ಆಚಾರಿ ಉಪಸ್ಥಿತರಿದ್ದರು.

    About The Author

    error: Content is protected !!