September 12, 2026

ಯಶಸ್ವಿಯಾಗಿ ಜರುಗಿದ ಕುಮಟಾ ತಾಲೂಕು ದಸರಾ ಕ್ರೀಡಾಕೂಟ

ಕುಮಟಾ: ಜಿಲ್ಲಾಡಳಿತ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್ ಕುಮಟಾ ಇವುಗಳ ಜಂಟಿ ಆಶ್ರಯದಲ್ಲಿ ನಗರದ ಮಣಕಿ ಮೈದಾನದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಯಶಸ್ವಿಯಾಗಿ ಜರುಗಿತು.

ಉದ್ಘಾಟನೆ ಹಾಗೂ ಗಣ್ಯರ ನುಡಿ: ಡಯಟ್ (ಆಡಳಿತ) ಉಪನಿರ್ದೇಶಕ ಎನ್.ಆರ್. ಹೆಗಡೆ ದೀಪ ಬೆಳಗಿ ಕ್ರೀಡಾಕೂಟ ಉದ್ಘಾಟಿಸಿದರು. ಕ್ರೀಡಾಪಟುಗಳು ಸ್ಪೂರ್ತಿಯಿಂದ ಭಾಗವಹಿಸಬೇಕು ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಅವರು ಕರೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಸಹಕಾರ ಹಾಗೂ ಆಯೋಜನೆ: ಕ್ರೀಡಾಕೂಟದ ಯಶಸ್ಸಿಗೆ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ವಿಶೇಷ ಸಹಕಾರ ನೀಡಿದ್ದಾರೆ ಎಂದು ತಾಲೂಕು ಸಂಯೋಜಕ ಹಾಗೂ ಕೆಪಿಎಸ್ ಅಘನಾಶಿನಿಯ ದೈಹಿಕ ಶಿಕ್ಷಕ ರಾಘವೇಂದ್ರ ಗಾಂವಕರ ಪ್ರಾಸ್ತಾವಿಕವಾಗಿ ತಿಳಿಸಿದರು. ವಿಜೇತ ಕ್ರೀಡಾಪಟುಗಳಿಗೆ ಮೆಡಲ್, ಸರ್ಟಿಫಿಕೇಟ್ ಹಾಗೂ ಕಪ್‌ಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮವನ್ನು ಪ್ರಗತಿ ವಿದ್ಯಾಲಯದ ದೈಹಿಕ ಶಿಕ್ಷಕ ಅರುಣ ನಾಯ್ಕ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಗಿರೀಶ ನಾಯಕ, ದೈಹಿಕ ಶಿಕ್ಷಕರಾದ ವಿನೋದ ನಾಯಕ, ಜಂಗಾ ಗೌಡ, ಪ್ರಕಾಶ ನಾಯ್ಕ, ಸುರೇಶ ನಾಯಕ, ಚಂಪಾವತಿ ನಾಯಕ, ಪ್ರೇಮ ಪಟಗಾರ, ಗೀತಾ ನಾಯಕ, ಶಾರದಾ ನಾಯ್ಕ, ಸಂತೋಷ ನಾಯಕ, ನಾಗರಾಜ ನಾಯಕ, ಜೈದೀಪ ನಾಯಕ, ಕಿರಣ ನಾಯ್ಕ, ವೈಭವ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    About The Author

    error: Content is protected !!