September 8, 2026

ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ

ಕುಮಟಾ: ಸಮೀಪದ ಬರ್ಗಿಯ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ, ಮಿರ್ಜಾನಿನ ಸರ್ಕಾರಿ ಉರ್ದು ಪ್ರೌಢಶಾಲೆಯ ಆಶ್ರಯದಲ್ಲಿ ನಡೆದ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಣಧೀರ ವೇದಿಕೆ ಕುಮಟಾ ತಾಲೂಕು ಘಟಕದ ಅಧ್ಯಕ್ಷ ಕನ್ನಡದ ಸಮೀರ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದರು. ಉರ್ದು ಮಾತೃಭಾಷೆಯ ವಿದ್ಯಾರ್ಥಿನಿಯರು ಅತ್ಯಂತ ಸೊಗಸಾಗಿ ನಾಡಗೀತೆ ಹಾಡಿದ್ದನ್ನು ಅವರು ಶ್ಲಾಘಿಸಿದರು.

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಅಂಕಣಕಾರ ಹಾಗೂ ರಾಜೀವ ಗಾಂಧಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಂಜುನಾಥ ಗಾಂವಕರ್ ಬರ್ಗಿ ಮಾತನಾಡಿ, ಸೋಲಿನಲ್ಲಿಯೂ ಸುಖವನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿ, ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಶಾಲೆಯನ್ನು ಅಭಿನಂದಿಸಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಶಾಲೆಯ ಮುಖ್ಯಾಧ್ಯಾಪಕ ಗೋಪಾಲ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಮಾರಂಭದಲ್ಲಿ ದಿಲೀಪ ನಾಯ್ಕ, ಎಂ.ಎಸ್. ದೊಡ್ಮನಿ, ಅರುಣ ನಾಯ್ಕ, ವಿನೋದ ನಾಯಕ, ಶಾರದಾ ನಾಯ್ಕ, ಸುನಿಲ ಅಂಬಿಗ ಹಾಗೂ ಎಂ.ಐ. ಭಟ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    About The Author

    error: Content is protected !!