ಹಿರೇಗುತ್ತಿ (ಕುಮಟಾ): ಮಿರ್ಜಾನ, ಬರ್ಗಿ ಹಾಗೂ ಹೊಸನಗರ ವಲಯ ಮಟ್ಟದ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟವು ಹಿರೇಗುತ್ತಿ ಹೈಸ್ಕೂಲ್ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು.
ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ಎನ್. ನಾಯಕ ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಹಾಗೂ ಸಹಕಾರದ ಗುಣಗಳನ್ನು ಬೆಳೆಸುತ್ತದೆ ಎಂದರು. ಕುಮಟಾ ಬಿಇಒ ಉದಯ ನಾಯ್ಕ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿ ಮುಖ್ಯ ಎಂದು ಕರೆ ನೀಡಿದರು.
ಕ್ರೀಡಾ ಜ್ಯೋತಿ ಹಾಗೂ ಪ್ರತಿಜ್ಞಾ ವಿಧಿ: ಹೊಸನಗರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವಿಕ್ರಮ್ ಹಳ್ಳೇರ ಕ್ರೀಡಾ ಜ್ಯೋತಿ ಬೆಳಗಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ ನಾಯಕ ಧ್ವಜವಂದನೆ ನೆರವೇರಿಸಿದರೆ, ರಾಜಶ್ರೀ ಗಾವಡಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮನ್ವಯಾಧಿಕಾರಿ ದಿನೇಶ ಪಂಡಿತ, ಪಿಡಿಒ ರೇಖಾ ನಾಯಕ, ಪ್ರಿನ್ಸಿಪಾಲ್ ನಾಗರಾಜ ಗಾಂವಕರ, ಮುಖ್ಯಾಧ್ಯಾಪಕ ವಿಶ್ವನಾಥ ಬೇವಿನಕಟ್ಟಿ, ಲಕ್ಷ್ಮೀಧರ ಮೊರಬಾ, ಸಿಆರ್ಪಿಗಳಾದ ಮೋಹನ ನಾಯ್ಕ, ಕಾಮಾಕ್ಷಿ ನಾಯಕ ಹಾಗೂ ವಿವಿಧ ಶಾಲೆಗಳ ಮುಖ್ಯಾಧ್ಯಾಪಕರು ಭಾಗವಹಿಸಿದ್ದರು.

ಹೊಸನಗರ-ಮೊರಬಾ ಶಾಲೆಯ ಮುಖ್ಯಾಧ್ಯಾಪಕಿ ವಿನುತಾ ನಾಯಕ ಸ್ವಾಗತಿಸಿದರು. ಎನ್. ರಾಮು ಹಿರೇಗುತ್ತಿ ಹಾಗೂ ಮೋಹಿನಿ ಗೌಡ ಕಾರ್ಯಕ್ರಮ ನಿರೂಪಿಸಿ, ಇಸಿಒ ಶ್ರೀನಿಧಿ ಹೆಗಡೆ ಧನ್ಯವಾದ ಸಮರ್ಪಿಸಿದರು.
About The Author


More Stories
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ
ಹಿರೇಗುತ್ತಿ ಹೈಸ್ಕೂಲಿನಲ್ಲಿ ಮಕ್ಕಳ ರಕ್ಷಣಾ ಕಾಯ್ದೆಗಳ ಅರಿವು ಜಾಗೃತಿ ಕಾರ್ಯಕ್ರಮ