ಭಟ್ಕಳ: ಬೋಲೆರೋ ವಾಹನಕ್ಕೆ ಸ್ಕೂಟಿ ತಾಗಿ ನಂಬರ್ ಪ್ಲೇಟ್ ಹಾನಿಯಾದ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿಯ ಬಳಿಕ ಸ್ಕೂಟಿ ಸವಾರನೊಬ್ಬ ಬೋಲೆರೋ ಚಾಲಕನಿಂದ ವಾಹನದ ಕೀ ಹಾಗೂ ₹15,000 ನಗದು ಕಸಿದುಕೊಂಡು ಪರಾರಿಯಾಗಿರುವ ಘಟನೆ ಸೆಪ್ಟೆಂಬರ್ 21ರಂದು ರಾತ್ರಿ ಬೆಳ್ಳಿ ಕನ್ನಡ ಶಾಲೆ ಸಮೀಪ ನಡೆದಿದೆ.

ಮಾವಿನಕುರ್ವೆಯ ಬೆಳ್ನಿ ನಿವಾಸಿ ಗಣೇಶ ತಿಮ್ಮಪ್ಪ ಖಾರ್ವಿ (23) ಎಂಬುವವರು ಮಾವಿನಕುರ್ವೆ ಬಂದರಿನಿಂದ ಮೀನು ತುಂಬಿಸಿಕೊಂಡು ಮಲ್ಪೆಗೆ ಬೋಲೆರೋ ವಾಹನದಲ್ಲಿ (KA-21-B-9866) ತೆರಳುತ್ತಿದ್ದರು. ರಾತ್ರಿ 7.30ರ ಸುಮಾರಿಗೆ ಬೆಳ್ಳಿ ಕನ್ನಡ ಶಾಲೆಯ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಾ ರಸ್ತೆ ಮಧ್ಯದಲ್ಲಿದ್ದ ಸ್ಕೂಟಿ ಸವಾರನಿಗೆ ಹಾರ್ನ್ ಮಾಡಿದಾಗ, ಸ್ಕೂಟಿ ಸವಾರ ಏಕಾಏಕಿ ವಾಹನ ನಿಲ್ಲಿಸಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿದ ಬೋಲೆರೋ ಸ್ಕೂಟಿಗೆ ತಾಗಿ ನಂಬರ್ ಪ್ಲೇಟ್ ಹಾನಿಗೊಳಗಾಗಿದೆ.
ಹಣ, ಕೀ ಕಸಿತ ಹಾಗೂ ಬೆದರಿಕೆ: ಸ್ಕೂಟಿಯ ಹಾನಿಯನ್ನು ಸರಿಪಡಿಸಿಕೊಡುವುದಾಗಿ ಚಾಲಕ ಗಣೇಶ ಹೇಳಿದರೂ ಕೇಳದ ಸ್ಕೂಟಿ ಸವಾರ, ಬೋಲೆರೋ ವಾಹನದ ಕೀ ಹಾಗೂ ಗಣೇಶ ಅವರ ಶರ್ಟ್ ಜೇಬಿನಲ್ಲಿದ್ದ ₹15,000 ನಗದನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ನಂತರ ಸ್ಥಳಕ್ಕೆ ಮರಳಿದ ಸವಾರ ಅಲ್ಲಿ ಜನ ಸೇರಿರುವುದನ್ನು ಕಂಡು ತಕ್ಷಣ ವೇಗವಾಗಿ ಪಟ್ಟಣದತ್ತ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಸ್ಕೂಟಿ (KA-20-6495) ಸವಾರನ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

About The Author


More Stories
ಭಟ್ಕಳದ ಎಐಟಿಎಂನಲ್ಲಿ ‘ಐಓಟಿ ಕ್ಲಬ್’ ಉದ್ಘಾಟನೆ: ಆಟೋಮೋಟಿವ್ ಐಓಟಿ ವೆಬಿನಾರ್ ಹಾಗೂ ಕಾರ್ಯಾಗಾರ
ಖುದ್ದು ಕಸ ಗುಡಿಸಿದ ಪಿಡಿಒ: ಸ್ವಚ್ಛತೆಗೆ ಮಾದರಿಯಾದ ಅಧಿಕಾರಿ ಯಾದವ ನಾಯ್ಕ
ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟಕ್ಕೆ ಕಡಿವಾಣ: ಐವರ ವಿರುದ್ಧ ಪ್ರತ್ಯೇಕ ಪ್ರಕರಣ, ನಗದು ಜಪ್ತಿ