ಭಟ್ಕಳ: ಗೋವಾದ ಪರ್ತಗಾಳಿಯಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಕರ್ನಾಟಕ ವಿಧಾನಸಭೆಯ ಉಪಸಭಾಪತಿ ಮಂಕಾಳ ವೈದ್ಯ ಭೇಟಿ ನೀಡಿ, ಚಾತುರ್ಮಾಸ ವ್ರತದಲ್ಲಿರುವ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪಸಭಾಪತಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರದ ಅನುಭವಗಳನ್ನು ಶ್ರೀಗಳೊಂದಿಗೆ ಹಂಚಿಕೊಂಡ ಅವರು, ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ, ಕಸ್ತೂರಿ ರಂಗನ್ ವರದಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಧರ್ಮಸಭೆಯಲ್ಲಿ ಸಮಾಲೋಚನೆ ನಡೆಸಿದರು.
ಉತ್ತರ ಕನ್ನಡ ಸಮಸ್ಯೆಗಳ ಚರ್ಚೆ:
ವಿಧಾನಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರ ಪರವಾಗಿ ಮಂಡಿಸಿದ ವಿವಿಧ ವಿಷಯಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಜನರ ಬೇಡಿಕೆಗಳ ಕುರಿತು ಮಂಕಾಳ ವೈದ್ಯ ಅವರು ಶ್ರೀಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯ ಜನರ ಧ್ವನಿಯಾಗಿ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತಿರುವುದಕ್ಕೆ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಸಂತಸ ವ್ಯಕ್ತಪಡಿಸಿ, ಅಭಿವೃದ್ಧಿ ಕಾರ್ಯಗಳನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗುವಂತೆ ಹಾರೈಸಿದರು.
ಸನ್ಮಾನ ಹಾಗೂ ಪ್ರಮುಖರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಮಠದ ವತಿಯಿಂದ ಉಪಸಭಾಪತಿ ಮಂಕಾಳ ವೈದ್ಯ ಅವರನ್ನು ಗೌರವಿಸಲಾಯಿತು. ಪರ್ತಗಾಳಿ ಚಾತುರ್ಮಾಸ ಕಮಿಟಿ ಅಧ್ಯಕ್ಷ ಅನಿಲ ಬಾಬ ಅವರು ಮುಖ್ಯ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಜಿಎಸ್ಬಿ ಸಮಾಜದ ಪ್ರಮುಖರಾದ ರಾಮು ಕಾಮತ, ನಾಗೇಶ ಭಟ್, ಕಲ್ಪೇಶ ಪೈ ಹಾಗೂ ಹೊನ್ನಾವರ ಜಿಎಸ್ಬಿ ಸಮಾಜದ ಪ್ರಮುಖರಾದ ಕಾಶಿನಾಥ ಪ್ರಭು, ರವೀಂದ್ರ ಪೈ, ಕಿರಣ ಪೈ ಸೇರಿದಂತೆ ಹಲವು ಮುಖಂಡರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
About The Author


More Stories
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್
ನಾಗ ಮಾಸ್ತಿ ಕ್ಷೇತ್ರದಲ್ಲಿ ವೈಭವದ ಮಹಿಳಾ ದಸರಾ; ಪ್ರತಿಭೆ ಅನಾವರಣಕ್ಕೆ ವೇದಿಕೆ
ನಾಗ ಮಾಸ್ತಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ; ಸನಾತನ ಸಂಸ್ಕೃತಿ ರಕ್ಷಣೆಗೆ ಒತ್ತು