October 24, 2026

ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ವಿದ್ಯಾರ್ಥಿಗಳ ಸಾಧನೆ: ಸತತ ನಾಲ್ಕನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಭಟ್ಕಳ: ಕುಮಟಾ ತಾಲೂಕಿನ ಮಣಕಿ ಮೈದಾನದಲ್ಲಿ ನಡೆದ 2026-27ನೇ ಶೈಕ್ಷಣಿಕ ಸಾಲಿನ ಪಿಯು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕು ಸತತ ನಾಲ್ಕನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ದಿ ನ್ಯೂ ಇಂಗ್ಲಿಷ್ ಕಾಲೇಜಿನ ವಿದ್ಯಾರ್ಥಿಗಳು ಬಾಲಕರ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜಯಂತ ಮರಾಠಿ 800 ಮೀ., 1500 ಮೀ. ಓಟಗಳಲ್ಲಿ ಪ್ರಥಮ ಹಾಗೂ 400 ಮೀ. ಹರ್ಡಲ್ಸ್ ಮತ್ತು 4×400 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ ಎನ್. ಕೆಲ್ಸಿ 400 ಮೀ. ಓಟ, 4×100 ಮೀ. ಮತ್ತು 4×400 ಮೀ. ರಿಲೇ ಹಾಗೂ ಟ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶಿವರಾಜ ಮೊಗೇರ 110 ಮೀ. ಹರ್ಡಲ್ಸ್ ಹಾಗೂ 4×100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ, 400 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಜಯ ನಾಯ್ಕ 4×400 ಮೀ. ರಿಲೇಯಲ್ಲಿ ಪ್ರಥಮ, ಫಹೀಮ್ ಹೆಮ್ಮರ್ ಎಸೆತದಲ್ಲಿ ಪ್ರಥಮ, ಸುಮಿತ್ ವಿ. ಮೊಗೇರ 4×100 ಮೀ. ರಿಲೇಯಲ್ಲಿ ಪ್ರಥಮ ಹಾಗೂ ಉದಯ ನಾಯ್ಕ 4×400 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿಯೂ ಭಟ್ಕಳ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಮೇಘನಾ ಎಂ. ನಾಯ್ಕ 800 ಮೀ. ಮತ್ತು 3000 ಮೀ. ಓಟಗಳಲ್ಲಿ ದ್ವಿತೀಯ, 4×400 ಮೀ. ರಿಲೇಯಲ್ಲಿ ಪ್ರಥಮ ಹಾಗೂ 1500 ಮೀ. ಮತ್ತು ಗುಡ್ಡಗಾಡು ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಧನ್ಯಾ ಗೋಂಡ 200 ಮೀ. ಓಟದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸೌಜನ್ಯ ಡಿ. ಹರಿಕಾಂತ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ 100 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಹಿತಾಶ್ರೀ ಕೆ. ಗೋಂಡ 800 ಮೀ. ಓಟದಲ್ಲಿ ತೃತೀಯ, 400 ಮೀ. ಹರ್ಡಲ್ಸ್‌ನಲ್ಲಿ ದ್ವಿತೀಯ ಹಾಗೂ ಗುಡ್ಡಗಾಡು ಓಟದಲ್ಲಿ ವಿಜೇತರಾಗಿದ್ದಾರೆ. ಯಶಿತಾ ಎಂ. ದೇವಾಡಿಗ 4×400 ಮೀ. ರಿಲೇಯಲ್ಲಿ ಪ್ರಥಮ ಹಾಗೂ ಯಶಸ್ವಿನಿ ನಾಯ್ಕ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ಗುಂಪು ಆಟಗಳಲ್ಲಿ ಖೋ-ಖೋದಲ್ಲಿ ದ್ವಿತೀಯ ಹಾಗೂ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕರಾಟೆ ವಿಭಾಗದಲ್ಲಿಯೂ ಭಟ್ಕಳದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ ವಿಭಾಗದಲ್ಲಿ ಸಚಿನ್ ಎಂ. ನಾಯ್ಕ ದ್ವಿತೀಯ, ರತನ್ ಎಲ್. ಪಾವಸ್ಕರ್ ಹಾಗೂ ವಿಜಯ್ ವಿ. ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಬಾಣೇಶ್ವರಿ ಎಂ. ನಾಯ್ಕ ಹಾಗೂ ಯಶಸ್ವಿನಿ ಪಿ. ನಾಯ್ಕ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದಿ ನ್ಯೂ ಇಂಗ್ಲಿಷ್ ಕಾಲೇಜಿನ ಒಟ್ಟು 34 ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ್ ನಾಯ್ಕ, ಟ್ರಸ್ಟಿ ಅನಿಲ್ ನಾಯ್ಕ, ಪ್ರಾಂಶುಪಾಲ ಡಾ. ವೀರೇಂದ್ರ ವಿ. ಶಾನಭಾಗ್, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

About The Author

error: Content is protected !!