October 22, 2026

ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ 83ನೇ ವಾರ್ಷಿಕ ಮಹಾಸಭೆ: ಶೇ 25 ಡಿವಿಡೆಂಡ್ ನೀಡಲು ಸಮ್ಮತಿ

ಪೊನ್ನಂಪೇಟೆ: ನಂ. 2783ನೇ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 83ನೇ ಹಾಗೂ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕಾಡ್ಯಮಾಡ ಎಸ್. ಭರತ್ ಅವರ ಅಧ್ಯಕ್ಷತೆಯಲ್ಲಿ ಕಾನೂರಿನ ಸಂಘದ ಸಭಾಂಗಣದಲ್ಲಿ ಜರುಗಿತು.

1937ರಲ್ಲಿ ಸ್ಥಾಪನೆಯಾದ ಕಾನೂರು ಸಂಘವು 89 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, 2009ರಿಂದ 2026ರವರೆಗೆ ಆಡಿಟ್‌ನಲ್ಲಿ ಸತತವಾಗಿ ‘ಎ’ ತರಗತಿ ಶ್ರೇಣಿ ಪಡೆಯುವ ಮೂಲಕ ಆಡಳಿತದಲ್ಲಿ ಸ್ವಚ್ಛತೆ ಹಾಗೂ ಪಾರದರ್ಶಕತೆ ಕಾಯ್ದುಕೊಂಡಿದೆ ಎಂದು ಅಧ್ಯಕ್ಷ ಭರತ್ ತಿಳಿಸಿದರು.

ಸಂಘದ ಪ್ರಮುಖಾಂಶಗಳು ಹಾಗೂ ಸೌಲಭ್ಯಗಳು:

ಆರ್ಥಿಕ ಭದ್ರತೆ: ಸಂಘದಲ್ಲಿ ಸದ್ಯ 1,584 ಸದಸ್ಯರಿದ್ದು, ₹3.71 ಕೋಟಿಗೂ ಅಧಿಕ ಕ್ಷೇಮ ನಿಧಿ, ₹1.45 ಕೋಟಿಗೂ ಹೆಚ್ಚು ಕಾಫಿ ತೋಟದ ಭಂಡವಾಳ ಮತ್ತು ಅಭಿವೃದ್ಧಿ ನಿಧಿ ಹಾಗೂ ₹1.12 ಕೋಟಿಗೂ ಅಧಿಕ ಕಟ್ಟಡ ಮತ್ತು ಇತರ ನಿಧಿಗಳಿವೆ.

ಸಾಲ ಮತ್ತು ಪ್ರೋತ್ಸಾಹ ಧನ: ಸದಸ್ಯರಿಗೆ ₹1 ಲಕ್ಷ ಜಾಮೀನು ಸಾಲ, ₹1 ಲಕ್ಷ ಗೊಬ್ಬರ ಸಾಲ ಹಾಗೂ ಮರಣನಿಧಿ ನೀಡಲಾಗುತ್ತಿದೆ. ಕೆ.ಸಿ.ಸಿ. ಫಸಲು ಸಾಲ ಪಡೆದ ಸದಸ್ಯರು ಮೃತಪಟ್ಟಲ್ಲಿ, ಕುಟುಂಬದ ವಾರಸುದಾರರು ನಿಗದಿತ ಗಡುವಿನೊಳಗೆ ಸಾಲ ತೀರಿಸಿದರೆ ಸಂಘದಿಂದ ₹25,000 ಪ್ರೋತ್ಸಾಹ ಧನ ನೀಡಲಾಗುವುದು.

ಶೇಕಡಾ 25 ಡಿವಿಡೆಂಡ್: ಪ್ರಸ್ತುತ ಸಾಲಿನಲ್ಲಿ ಗಳಿಸಿದ ಲಾಭದಿಂದ ಸದಸ್ಯರಿಗೆ ಶೇ. 25% ಡಿವಿಡೆಂಡ್ ನೀಡುವ ಅಧ್ಯಕ್ಷರ ಪ್ರಸ್ತಾಪಕ್ಕೆ ಮಹಾಸಭೆ ಪೂರ್ಣ ಅನುಮೋದನೆ ನೀಡಿತು.

    ಸಂಘದ ಮೂಲಕ ಗೊಬ್ಬರ, ಕ್ರಿಮಿನಾಶಕ, ಉಪಕರಣಗಳು, ದಿನಬಳಕೆ ವಸ್ತುಗಳು, ಕಾಫಿ ತೇವಾಂಶ ಪರೀಕ್ಷೆ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗುತ್ತಿದ್ದು, ಇವುಗಳ ಪ್ರಯೋಜನ ಪಡೆಯುವಂತೆ ಕರೆ ನೀಡಲಾಯಿತು.

    ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸಿ. ಬಿ. ಬೆಳ್ಳಪ್ಪ, ನಿರ್ದೇಶಕರಾದ ಎ. ಎ. ವಿವೇಕ್, ಎ. ಎಂ. ಅಚ್ಚಯ್ಯ, ಸಿ. ಎನ್. ಬಿದ್ದಪ್ಪ, ಕೆ. ಎಸ್. ಬೋಪಣ್ಣ, ಸಿ. ಪಿ. ಶಮ್ಮಿ, ಕೆ. ಎಂ. ಕುಸುಮ, ಎಂ. ಕೆ. ರವಿ, ಕೆ. ಎನ್. ನಾಚಪ್ಪ, ಹೆಚ್. ಕೆ. ರಾಜ, ಎಂ. ಎಂ. ಜಗನ್ನಾಥ್, ವಿ. ಎಸ್. ಸುಮಿತ್ರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

    (ವರದಿ: ಪ್ರಿತುನ್ ಪೂವಣ್ಣ)

    About The Author

    error: Content is protected !!