ಭಟ್ಕಳ: ಸಾಗರ ಕವಚ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಅರಬ್ಬಿ ಸಮುದ್ರದಲ್ಲಿ 40-50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಅಕ್ಟೋಬರ್ 7ರ ಬೆಳಿಗ್ಗೆ ಸಮುದ್ರದಲ್ಲಿ ಬೋಟ್ ಮೂಲಕ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ತೆಂಗಿನಗುಂಡಿ ಭಾಗದ ಸಮುದ್ರದಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಮೃತದೇಹವು ಸುಮಾರು 6–7 ದಿನಗಳ ಹಳೆಯದಾಗಿದ್ದು, ಸಮುದ್ರ ಜೀವಿಗಳು ಮುಖದ ಭಾಗವನ್ನು ಕಚ್ಚಿರುವುದರಿಂದ ತಕ್ಷಣಕ್ಕೆ ಗುರುತು ಸಿಕ್ಕಿಲ್ಲ.
ಮೃತನ ಚಹರೆ ಹಾಗೂ ವಿವರ:
ಎತ್ತರ ಮತ್ತು ಮೈಬಣ್ಣ: ಸುಮಾರು 5 ಅಡಿ 8 ಇಂಚು ಎತ್ತರ, ಬಿಳಿ ಮೈಬಣ್ಣ.

ಧರಿಸಿದ್ದ ಉಡುಪು: ಕಂದು ಬಣ್ಣದ ನಿಕ್ಕರ್.
ವಿಶೇಷ ಗುರುತುಗಳು: ಬಲಗೈಯಲ್ಲಿ ಖಡ್ಗದ ಗುರುತಿನ ಟ್ಯಾಟೂ (ಹಚ್ಚೆ) ಹಾಗೂ ಕೆಂಪು ಬಣ್ಣದ ದಾರ.
ಕರಾವಳಿ ಕಾವಲು ಪಡೆಯ ಪಿಎಸ್ಐ ವೀಣಾ ಚಿತ್ರಾಪುರ ಹಾಗೂ ಸಿಬ್ಬಂದಿ ರಮೇಶ್, ದರ್ಶನ್, ಬೋಟ್ ಸಿಬ್ಬಂದಿ ಅಶೋಕ್ ದುರ್ಗೇಕರ್, ನೋಯಲ್, ಬಸಪ್ಪ ಮತ್ತು ಮತ್ಸ್ಯಜನನಿ ಬೋಟ್ನ ಸ್ಥಳೀಯ ಮೀನುಗಾರರಾದ ಜಯಂತ್ ಮೊಗೇರ ಹಾಗೂ ರಾಜೇಶ್ ದೇವಾಡಿಗ ಅವರ ಸಹಕಾರದೊಂದಿಗೆ ಮೃತದೇಹವನ್ನು ತೆಂಗಿನಗುಂಡಿ ಜಟ್ಟಿಗೆ ತರಲಾಯಿತು.
ಘಟನೆ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ ತಿಳಿದಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಅಥವಾ ಮುರುಡೇಶ್ವರ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ವರದಿ: ಭಾವನಾ ಟಿವಿ ಡೆಸ್ಕ್
About The Author


More Stories
ಮೈಸೂರು ದಸರಾ ಕ್ರೀಡಾಕೂಟ: ಕರಾಟೆಯಲ್ಲಿ ಕಂಚಿನ ಪದಕ ಗೆದ್ದ ಭಟ್ಕಳದ ಪ್ರವೀಣ್ ಹರಿಜನ್
ನಾಗ ಮಾಸ್ತಿ ಕ್ಷೇತ್ರದಲ್ಲಿ ವೈಭವದ ಮಹಿಳಾ ದಸರಾ; ಪ್ರತಿಭೆ ಅನಾವರಣಕ್ಕೆ ವೇದಿಕೆ
ನಾಗ ಮಾಸ್ತಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆಗೆ ಚಾಲನೆ; ಸನಾತನ ಸಂಸ್ಕೃತಿ ರಕ್ಷಣೆಗೆ ಒತ್ತು