October 22, 2026

ನವರಾತ್ರಿ ನಿಮಿತ್ತ ಅ.17ರಂದು ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ

ಭಟ್ಕಳ: ಶ್ರೀ ಕ್ಷೇತ್ರದ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವತಿಯಿಂದ ದ್ವಿತೀಯ ವರ್ಷದ ನವರಾತ್ರಿ ವಿಶೇಷ ಪೂಜೆಯ ಅಂಗವಾಗಿ ಅಕ್ಟೋಬರ್ 17ರಂದು ಶಾಲಾ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ನವರಾತ್ರಿ ಪೂಜೆಯ 7ನೇ ದಿನದಂದು ಈ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯ ವಿಭಾಗಗಳು ಹಾಗೂ ಶ್ಲೋಕಗಳ ವಿವರ:

1ರಿಂದ 7ನೇ ತರಗತಿ: ಭಗವದ್ಗೀತೆಯ 2ನೇ ಅಧ್ಯಾಯದ 1ರಿಂದ 5ನೇ ಶ್ಲೋಕಗಳು.

8ರಿಂದ 10ನೇ ತರಗತಿ: ಭಗವದ್ಗೀತೆಯ 2ನೇ ಅಧ್ಯಾಯದ 1ರಿಂದ 7ನೇ ಶ್ಲೋಕಗಳು.

    ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಗುವುದು. ಸ್ಪರ್ಧಾರ್ಥಿಗಳು ಯಾವುದೇ ಹಿನ್ನೆಲೆ ವಾದ್ಯಗಳನ್ನು ಬಳಸುವಂತಿಲ್ಲ ಮತ್ತು ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

    ನೋಂದಣಿಗೆ ಅಕ್ಟೋಬರ್ 15 ಕೊನೆಯ ದಿನ: ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ಅಕ್ಟೋಬರ್ 15ರೊಳಗೆ ತಮ್ಮ ಶಾಲಾ ಗುರುತಿನ ಚೀಟಿಯ (ID Card) ಪ್ರತಿಯನ್ನು ವಾಟ್ಸಾಪ್ ಮೂಲಕ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.

    ಸಂಪರ್ಕಿಸಬೇಕಾದ ಸಂಖ್ಯೆಗಳು:

    ದೇವಿದಾಸ ನಾಯ್ಕ (9916715703)

    ಮಂಗಳ ಗೊಂಡ (9242222643)

    ಶಿವ ಮೊಗೇರ (9743699391)

    ಮಂಜುನಾಥ ನಾಯ್ಕ (9945858713)

    ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸರ್ವಸದಸ್ಯರು ಕೋರಿದ್ದಾರೆ.

    About The Author

    error: Content is protected !!