ಹೊನ್ನಾವರ :ಆನಂದವನ್ನು ನೀಡುತ್ತದೆ. ಇದು ಒಂದು ಶಕ್ತಿ, ದಿವ್ಯ ತೇಜಸ್ಸು, ಇದಕ್ಕೆ ಭಾಷೆಯ ಮಿತಿ ಇಲ್ಲ, ಗಡಿಯ ಚೌಕಟ್ಟಿಲ್ಲ ,ಇದು ವಿಶ್ವ ವ್ಯಾಪಿಯಾಗಿದೆ ಎಂದು ಬೆಂಗಳೂರಿನ ಸಪ್ತಕದ ರೂವಾರಿ ಶ್ರೀ ಜಿ ಎಸ್ ಹೆಗಡೆಯವರು ನುಡಿದರು.
ಇವರು ಸಪ್ತಕ ಬೆಂಗಳೂರು ಹಾಗೂ ಸಮರ್ಪಣಾ ವೇದಿಕೆ ಗುಣವಂತೆ ಇದರ ಸಂಯುಕ್ತ ಆಶಯದಲ್ಲಿ, ಒಕ್ಕಲಿಗರ ಸಭಾಭವನದಲ್ಲಿ ಜರುಗಿದ “ಸ್ನೇಹ ಸೌಹಾರ್ದ ಕೂಟ”ದಲ್ಲಿ 75 ರ ಹರೆಯದಲ್ಲಿ ‘ಸಮರ್ಪಣಾ ಸನ್ಮಾನ’ವನ್ನು ಸ್ವೀಕರಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಾಹಿತಿ ಡಾ ಶ್ರೀಪಾದ ಶೆಟ್ಟಿಯವರು ಮಾತನಾಡಿ ಗುಣವಂತೆಯ ಜನರು ಸುಸಂಸ್ಕೃತರು ಕಲಾಭಿಮಾನಿಗಳು ಇಲ್ಲಿಯ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು. ಸಂಗೀತವನ್ನೇ ತಮ್ಮ ಉಸಿರನ್ನಾಗಿಸಿಕೊಂಡ ಜಿ ಎಸ್ ಹೆಗಡೆಯವರನ್ನು ಸನ್ಮಾನಿಸಿದ್ದು ಸಮಯೋಚಿತವಾಗಿದೆ ಎಂದು ನುಡಿದರು. ಸಹಕಾರಿ ರತ್ನ ಗಣಪಯ್ಯ ಗೌಡ ಮುಗುಳಿ ಯವರು ಉಪಸಿತರಿದ್ದರು.
ಆಧ್ಯಾತ್ಮಿಕ ಚಿಂತಕರು, ಶ್ರೇಷ್ಠ ವಾಗ್ಮಿಗಳು,ರಂಗ ಕಲಾವಿದರೂ ಆದ ವೈ ವಿ ಗುಂಡುರಾವ್ ರವರ “ಮಾತು – ಕತೆ” ಜನರನ್ನು ಆಕರ್ಷಿಸಿತ್ತು. ಕೆರೆಮನೆ ರಾಜೇಶ್ವರಿ ಹೆಗಡೆ ಹಾಗೂ ಸುಹಾಸಿನಿ ಹೆಗಡೆಯವರ ಸಂಗೀತವು ಮೆಚ್ಚುಗೆ ಗಳಿಸಿತ್ತು.ಶಿರೀಶ್ ವೈದ್ಯ ತಬಲಾ ಮತ್ತು ಮಾರುತಿ ನಾಯ್ಕರವರು ಹಾರ್ಮೋನಿಯಂ ಸಾಥ್ ನೀಡಿದರು. ವೇದಿಕೆಯ ಸಂಚಾಲಕರಾದ ಎಚ್ಎಸ್ ಗೌಡ ರವರು ಸ್ವಾಗತಿಸಿದರು, ಎಂ ಎಸ್ ಹೆಗಡೆ ವಂದಿಸಿದರು, ಎಲ್ ಎಂ ಹೆಗಡೆ ನಿರೂಪಿಸಿದರು.

More Stories
ಕರ್ಕಿಯಲ್ಲಿ ದಿವಂಗತ ಪ್ರಭಾಕರ ಭಂಡಾರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಆಕಸ್ಮಿಕ ಬೆಂಕಿ
೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ನೇತ್ರ ತಪಾಸಣಾ ಶಿಬಿರ