ಕೆಆರ್ ಪೇಟೆ : ಒಕ್ಕಲಿಗರ ಮಹಾ ಸಂಸ್ಥಾನ ಮಠದ ಭೈರವೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾ ಸ್ವಾಮೀಜಿಯವರ ಸಂಸ್ಕರಣೆ ಹಾಗೂ ಪೀಠಾಧಿಪತಿಗಳಾದ ಡಾ.ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮಕ್ಕೆ ಕೆ ಆರ್ ಪೇಟೆ ಪಟ್ಟಣದ ಟಿಎಪಿಸಿಎಂಎಸ್ ನ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದ ಆಭರಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ಫೆಬ್ರವರಿ 10ನೇ ತಾರೀಖು ಮಂಗಳವಾರ ಬೆಳಿಗ್ಗೆ10 ಗಂಟೆಗೆ ಪ್ರವಾಸಿ ಮಂದಿರ ಬಳಿಯ ಎಂ.ಕೆ.ಬೊಮ್ಮೇ ಗೌಡ ವೃತದಿಂದ ಪೂಜ್ಯಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರನ್ನು ಬೆಳ್ಳಿ ಸಾರೋಟಿನಲ್ಲಿ ಕೂರಿಸಿ, ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಗುವುದು. ಕೃಷ್ಣರಾಜಪೇಟೆ ಪಟ್ಟಣದಲ್ಲಿ ಭಕ್ತಾದಿಗಳು ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಗುರುವಂದನೆ ಹಾಗೂ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದ್ದು ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ತಾಲೂಕಿನಾದ್ಯಂತ ಶ್ರೀಗಳ ಅಭಿಮಾನಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ಕಾರ್ಯಕ್ರಮದ ಸಂಘಟಕರಾದ ಡಾ.ಕೆ.ಕಾಳೇಗೌಡ ಮನವಿ ಮಾಡಿದ್ದಾರೆ.

More Stories
ಶ್ರೀ ಪಂಚಭೊತೇಶ್ವರ ಸುಕ್ಷೇತ್ರ ದೇವಾಲಯದ ಮಂಠದಲ್ಲಿ ಮಕ್ಕಳಗೆ ಸಂಸ್ಕಾರ ಜ್ಞಾನ ಶಿಭಿರ
ವಿಜಯವಾಣಿ ಪತ್ರಕರ್ತನಿಗೆ ಜೆಡಿಎಸ್ ಮುಖಂಡರಿಂದ ಸನ್ಮಾನ
ಕೆ.ಆರ್.ಪೇಟೆಯಲ್ಲಿ ಏಪ್ರಿಲ್ 18ರ ಶನಿವಾರ, ರೈತರಿಗಾಗಿ ಒಂದು ದಿನದ ಜೇನು ಕೃಷಿ ಕುರಿತ ವಿಚಾರ ಸಂಕಿರಣ