ಹೊನ್ನಾವರ ; ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ತಾಲೂಕಿನ ಮೂವರು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಹೊನ್ನಾವರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೋಹಿತ್ ದೇವ ಗೌಡ ಪ್ರಥಮ ಸ್ಥಾನ, ನಮೃತಾ ದೇವ ಗೌಡ ಪ್ರಥಮ ಸ್ಥಾನ, ಮಂಜುನಾಥ ಹನುಮಂತ ಗೌಡ ಕವಲಕ್ಕಿ ದ್ವಿತೀಯ ಸ್ಥಾನ ಪಡೆದು ಹೊನ್ನಾವರ ತಾಲೂಕಿಗೆ ಕೀರ್ತಿ ತಂದಿರುತ್ತಾರೆ. ಮೋಹಿತ್ ಗೌಡ ಗೋಲ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ ಮಂಕಿಯಲ್ಲಿ 5 ನೇ ತರಗತಿ ಅಧ್ಯಯನ ಮಾಡುತ್ತಿದ್ದಾನೆ. ನಮೃತಾ ಗೌಡ ಇವರು ಇಡಗುಂಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರು ಇಡಗುಂಜಿ ಕುಳಿಮನೆಯ ಮಂಗಲಾ ಮತ್ತು ದೇವು ಗೌಡ ದಂಪತಿಯ ಮಕ್ಕಳಾಗಿದ್ದಾರೆ. ಆರಂಭದಲ್ಲಿ ಯೋಗ ಶಿಕ್ಷಕಿ ರಾಜೇಶ್ವರಿ ಹೆಗಡೆ ಇವರಿಂದ ಪ್ರಾಥಮಿಕ ಯೋಗಾಭ್ಯಾಸ ಪಡೆದು ಪ್ರಸುತ್ತ ಸುಚಿತ್ರಾ ಬೆಂಗಳೂರು ಇವರಿಂದ ಆನ್ಲೈಲ್ ಯೋಗಾಭ್ಯಾಸ ಪಡೆಯುತ್ತಿದ್ದಾರೆ. ಇವರು ರಾಜ್ಯ, ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ತಾಲೂಕ ಆಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿರುವ ಜೊತೆ ಸ್ಥಳಿಯವಾಗಿ ಹಲವರು ಸನ್ಮಾನಿಸಿ ಗೌರವಿಸಿದ್ದಾರೆ.
ಕವಲಕ್ಕಿಯ ಮಂಜುನಾಥ ಹನುಮಂತ ಗೌಡ ಈತನ ಆರ್ಟಿಸ್ಟಿಕ್ಸ್ ಸೋಲೋ ವಿಭಾಗದಲ್ಲಿ ಎಂಟು ದೇಶಗಳಿಂದ ಆಗಮಿಸಿದ ಸ್ಪರ್ಧಿಗಳ ವಿರುದ್ದ ತಿವ್ರ ಪೈಪೋಟಿ ನೀಡಿ ವಿಜಯ ಸಾಧಿಸುವ ಮೂಲಕ ಬೆಳ್ಳಿ ಪದಕವನ್ನು ಪಡೆದಿದ್ದಾನೆ. ಸಾಧನೆ ಮಾಡಿದ ಮೂವರು ಪ್ರತಿಭಾವಂತರಿಗೂ ತಾಲೂಕಿನ ಚೈತನ್ಯ ವಿಕಾಸನ ಯೋಗ ಕೇಂದ್ರ ಹೊನ್ನಾವರ ಇವರು ತವರಿಗೆ ಆಗಮಿಸಿದ ಬಳಿಕ ಸನ್ಮಾನಿಸಿ ಗೌರವಿಸಿದರು. ಸಚಿವ ಮಂಕಾಳ ವೈದ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸಾಧನೆಗೆ ಅಭಿನಂದಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಸಾಧನೆಗೆ ಪೊತ್ಸಾಹ ಅಗತ್ಯವಿದ್ದು,ವಿವಿಧ ಸಂಘಟನೆಯ ಪ್ರಮುಖರು, ಜನಪ್ರತಿನಿಧಿಗಳು ಪೊತ್ಸಾಹ ನೀಡುವ ಮೂಲಕ ಬೆಂಬಲಿಸಬೇಕಿದೆ.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಮಾಳ್ಕೋಡ ಶಾಲೆ ಶತಮಾನೋತ್ಸವ ಅಂಗವಾಗಿ ಪೂರ್ವ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನಕ್ಕೆ ಚಾಲನೆ
ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಹೊನ್ನಾವರ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸುಧೀಶ ನಾಯ್ಕ ಆಯ್ಕೆ