ಭಟ್ಕಳ: ತಾಲೂಕಿನ ಪ್ರೀತಿ ಸ್ಪೋಟ್ಸ್ ಕ್ಲಬ್ (ರಿ) ಸಂಸ್ಥೆಯು ಕ್ರೀಡೆ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ. ಇತ್ತೀಚೆಗೆ ಕ್ಲಬ್ ವತಿಯಿಂದ ಆಯೋಜಿಸಲಾದ “ಪ್ರೋ ಕಬಡ್ಡಿ” ಮಾದರಿಯ ಭವ್ಯ ಪಂದ್ಯಾವಳಿಯಲ್ಲಿ ಉಳಿದ ₹40,000 (ನಲವತ್ತು ಸಾವಿರ) ಮೊತ್ತವನ್ನು ಕಿಡ್ನಿ ಹಾಗೂ ಲಿವರ್ ವೈಫಲ್ಯದಿಂದ ಬಳಲುತ್ತಿರುವ ಶಿರಾಲಿ ಗ್ರಾಮದ ಬಡ್ಡುಕುಳಿಯ ನಿವಾಸಿ ಸಂಜೀವ ಜಯಂತ ನಾಯ್ಕ ಅವರಿಗೆ ನೆರವಾಗಿ ನೀಡಲಾಗಿದೆ.
ಹಲವಾರು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಬಂದಿರುವ ಪ್ರೀತಿ ಸ್ಪೋಟ್ಸ್ ಕ್ಲಬ್, ಯುವ ಪ್ರತಿಭೆಗಳ ಅಭಿವೃದ್ಧಿ, ಬಡ ವಿದ್ಯಾರ್ಥಿಗಳಿಗೆ ನೆರವು ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಗಮನ ಸೆಳೆದಿದೆ. ಕ್ರೀಡಾ ಚಟುವಟಿಕೆಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಕ್ಲಬ್‌ನ ಈ ಕಾರ್ಯ ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಸಂಕಷ್ಟದಲ್ಲಿರುವ ವ್ಯಕ್ತಿಗೆ ಆರ್ಥಿಕ ನೆರವು ನೀಡಿ ಬದುಕಿಗೆ ಆಶೆಯ ಕಿರಣ ಮೂಡಿಸಿರುವ ಕ್ಲಬ್‌ನ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More Stories
ಭಟ್ಕಳದಲ್ಲಿ ಮನೆ ಕಳ್ಳತನ: 5.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೆ
ಮುರ್ಡೇಶ್ವರದಲ್ಲಿ ಭೀಕರ ರಸ್ತೆ ಅಪಘಾತ: ಮಾಜಿ ಸೈನಿಕ ಸಾವು, ಮೂವರಿಗೆ ಗಾಯ
ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡಕ್ಕೆ ಮೇ 14ರಂದು ಶಿಲಾನ್ಯಾಸ