May 31, 2026

ತೆಂಗಿನ ಮರದಿಂದ ಬಿದ್ದು ಗಾಯ: ನೋವು ಸಹಿಸಲಾಗದೆ ವ್ಯಕ್ತಿ ಆತ್ಮಹತ್ಯೆ


ಭಟ್ಕಳ: ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಗಾಯಗಳಿಂದ ಉಂಟಾದ ತೀವ್ರ ನೋವನ್ನು ಸಹಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲೂಕಿನ ಹೆಬಳೆ ಹೆರಿಕೇರಿ ಗ್ರಾಮದಲ್ಲಿ ನಡೆದಿದೆ.


ಮೃತರನ್ನು 47 ವರ್ಷದ ತಿಮ್ಮಪ್ಪ ಬಡ್ಕಗೊಂಡ ಎಂದು ಗುರುತಿಸಲಾಗಿದೆ.
ತಿಮ್ಮಪ್ಪ ಅವರು ತೆಂಗಿನ ಕಾಯಿ ಕೀಳುವ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗಳಿಂದ ಉಂಟಾದ ನೋವು ಹೆಚ್ಚಾಗುತ್ತಿದ್ದಂತೆ ಮನನೊಂದು, ಮನೆಯಲ್ಲಿ ಇದ್ದ “ಸರ್ಜಿಕಲ್ ಸ್ಪಿರಿಟ್” ಸೇವಿಸಿರುವುದಾಗಿ ತಿಳಿದುಬಂದಿದೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತರ ಪುತ್ರ ಸುಬ್ರಮಣ್ಯ ಬಡ್ಕಗೊಂಡ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

About The Author

error: Content is protected !!