ಶಿರಸಿ: ಇಲ್ಲಿನ ಶ್ರೀಸಾಯಿ ಸಂಗೀತ ವಿದ್ಯಾಲಯದ 44ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹುತಗಾರ ಸ್ವರ ಸಂಗಮ ವಿದ್ಯಾಲಯದ ಸಂಯುಕ್ತ ಸಂಗೀತ ಸಮ್ಮೇಳನವು ನಗರದ ನ್ರದ ವೆಂಕಟ್ರಮಣ ದೇವಸ್ಥಾನದ ಕೆಳ ಆವರಣದಲ್ಲಿ ಅದ್ಧೂರಿಯಾಗಿ ಹಾಗೂ ಯಶಸ್ವಿಯಾಗಿ ಜರುಗಿತು.
ಸಂಗೀತ ಕಾರ್ಯಕ್ರಮಗಳ ಜೊತೆಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ-ನಾಟಕ ಕಲಾವಿದರಾದ ವಿಶ್ವನಾಥ ಹೆಗಡೆ ಕಾನಳ್ಳಿ ಹಾಗೂ ಜಿ.ವಿ. ಹೆಗಡೆ ಕುಂಬ್ರಿ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಮೊಕ್ತೇಸರ ವಿಷ್ಣುದಾಸ ಕಾಸರಗೋಡ ಮಾತನಾಡಿ, ರಾಯರಪೇಟೆಯ ಐದು ದೇವಸ್ಥಾನಗಳ ನಡುವೆ ಸಂಗೀತ ತರಗತಿಗಳು ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಶ್ರೇಯಸ್ಸು ಸಾಯಿ ಸಂಗೀತ ವಿದ್ಯಾಲಯಕ್ಕಿದೆ ಎಂದು ಹೇಳಿದರು. ಈ ವಿದ್ಯಾಲಯವು ಭವಿಷ್ಯದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುವ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ತಾಯಂದಿರು ಶಾಸ್ತ್ರೀಯ ಸಂಗೀತ ಕಲಿತರೆ ಮಕ್ಕಳಿಗೂ ಅದೇ ದಾರಿಯಲ್ಲಿ ಸಾಗುವ ಪ್ರೇರಣೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಯಮುನಾ ರಂಗನಾಥ ಹೆಗಡೆ ಶೀಗೇಹಳ್ಳಿ ಅವರು ಗೌರವ ಉಪಸ್ಥಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರಾಗಿ ಪ್ರಸಿದ್ಧ ಗಾಯಕಿ ರಾಧಾ ದೇಸಾಯಿ (ಧಾರವಾಡ) ಹಾಗೂ ವಿ. ಶ್ರೀಪಾದ ಹೆಗಡೆ (ಸೋಮನಮನೆ) ಅವರು ಮನಮೋಹಕ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಅಕ್ಷಯ್ ಭಟ್ ಅಂಸಳ್ಳಿ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು ಅವರು ಸಾಥ್ ನೀಡಿದರು.
ದಿನವಿಡೀ ಸಂಗೀತ ಶಾಲೆಯ ಹಿರಿಕಿರಿಯ ವಿದ್ಯಾರ್ಥಿಗಳಿಂದ ಗಾಯನ-ವಾದನ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಕೊನೆಯಲ್ಲಿ ಸಾಯಿ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಎಂ.ಪಿ. ಹೆಗಡೆ ಪಡಿಗೆರೆ ಅವರು ಗಾಯನ ಪ್ರಸ್ತುತಪಡಿಸಿದರು. ಸ್ವರ ಸಂಗಮ ವಿದ್ಯಾಲಯದ ಪ್ರಾಚಾರ್ಯ ದಿನೇಶ್ ಹೆಗಡೆ ಅವರು ವಂದನಾರ್ಪಣೆ ಸಲ್ಲಿಸಿದರು.

More Stories
ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ 59ನೇ ವರ್ಧಂತಿ ಉತ್ಸವ: ರಕ್ತದಾನ, ಆರೋಗ್ಯ ಶಿಬಿರ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನ
ಸ್ವರ್ಣವಲ್ಲೀ ಮಠದ ಕಿರಿಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ವಿಶ್ವ ಯೋಗ ದಿನಾಚರಣೆ: ಸ್ವತಃ ಯೋಗಾಸನ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು
ಬಿವಿಟಿಯ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಹನ ಭಾಸ್ಕರ ಹೆಗಡೆ ಅಧಿಕಾರ ಸ್ವೀಕಾರ