ಹೊನ್ನಾವರ ; ತಾಲೂಕಿನ ಗಾಣಿಗ ಸಮಾಜದ ಶ್ರೀನಿಧಿ ಸೇವಾ ವಾಹಿನಿ ಸಂಘಟನೆಯು 25 ವಸಂತಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಮೇ 24 ರಂದು ಬಾಳೆಗದ್ದೆ ವೆಂಕ್ರಟಮಣ ಸಭಾಭವನದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಆಯೋಜಿಸಲಾಗಿದೆ ಎಂದು ಸಂಘಟನೆಯ ತಾಲೂಕ ಅಧ್ಯಕ್ಷ ಕೇಶವ ಶೆಟ್ಟಿ ಮಾಹಿತಿ ನೀಡಿದರು.

ವೆಂಕ್ರಟಮಣ ದೇವಾಲಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಮಾಜದ ಶೈಯೊಭಿವೃದ್ದಿಗಾಗಿ ಹುಟ್ಟಿಕೊಂಡ ಸಂಘವು ಕಳೆದ 25 ವರ್ಷದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ತಾಲೂಕಿನ ಅಧ್ಯಯನ ಮಾಡುತ್ತಿರುವ ಸಮಾಜದ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ನೋಟಬುಕ್ ವಿತರಣೆ ಮಾಡುತ್ತಾ ಬಂದಿದ್ದೇವೆ. ಈ ಬಾರಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಸಮಾಜದ ವಿವಿಧ ಕ್ಷೇತ್ರದಮೂವತ್ತಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸುವ ಜೊತೆ ವಿದ್ಯಾರ್ಥಿಗಳಿಗೆ ನೋಟಬುಕ್ ಮತ್ತು ಬ್ಯಾಗ್ ವಿತರಣೆ ಮಾಡುತ್ತಿದ್ದೇವೆ. ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮದ ಉದ್ಘಾಟನೆ, ಊಟದ ವಿರಾಮದ ನಂತರ ಸಮಾರೋಪ ಸಮಾರಂಭ, ನಂತರ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ, ಸಂಸ್ಥಾಪಕ ಅಧ್ಯಕ್ಷ ಡಾ. ಶ್ರೀಪಾದ ಶೆಟ್ಡಿ, ಸಂಘದ ಅಧ್ಯಕ್ಷ ಕೇಶವ ಶೆಟ್ಟಿ, ಉದ್ಯಮಿದಾರರಾದ ರವಿಕುಮಾರ ಶೆಟ್ಟಿ, ಸುರೇಶ ಶೆಟ್ಟಿ, ಮಹೇಶ ನಾಯ್ಕ ಸಂತೆಗುಳಿ, ನರಸಿಂಹ ಶೆಟ್ಟಿ ಕಡತೋಕಾ, ಸಂದೇಶ ಶೆಟ್ಟಿ, ಶಿವಮೊಗ್ಗಾ ಜಿಲ್ಲಾ ನೊಂದಾಣಿಧಿಕಾರಿ ನಾಗಭೂಷಣ ಕಲ್ಮನೆ, ಕುಂದಾಪುರ ಠಾಣಾ ಸಿಪಿಐ ಸಂತೋಷ ಕಾಯ್ಕಿಣಿ, ಭಟ್ಕಳ ಪದವಿ ಕಾಲೇಜಿನ ಪ್ರಾಚಾರ್ಯ ನಾಗೇಶ ಶೆಟ್ಟಿ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಗಜಾನನ ಶೆಟ್ಟಿ, ಯಧುವಿರ ಸೊಸೈಟಿ ಅಧ್ಯಕ್ಷ ಶ್ರೀಕಾಂತ ನಾಯ್ಕ, ಬಾಳೆಗದ್ದೆ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ.ಶೆಟ್ಟಿ, ಜಯ ಕರ್ನಾಟಕ ಸಂಘ ಜಿಲ್ಲಾ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ಸುನಂದಾ ಶೆಟ್ಟಿ, ಶಿಕ್ಷಕ ಧರ್ಮೆಂದ್ರ ಹಳೆಮಠ ಉಪಸ್ಥಿತರಿರುವರು.
ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ರಾಜ್ಯ ಗಾಣಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಶ್ವಾಸಕುಮಾರ ದಾಸ್, ಕುಂಬಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಡಾ. ಶ್ರೀನಿವಾಸ ವೇಲು, ತಹಶೀಲ್ದಾರ ಪ್ರವೀಣ ಕರಾಂಡೆ, ಉದ್ಯಮಿದಾರರಾದ ಮಂಜುನಾಥ ನಾಯ್ಕ, ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದರ್ಶಿ ಬೀನಾ ವೈದ್ಯ, ಗೋಪಾಲಕೃಷ್ಣ ದೇವಾಸ್ಥಾನದ ಅಧ್ಯಕ್ಷ ಸುಭಾಸ ಶೆಟ್ಟಿ, ನಿವೃತ್ತ ನೌಕರ ಗಣಪತಿ ಶೆಟ್ಟಿ, ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ ವಿನಾಯಕ ಶೆಟ್ಟಿ, ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ, ಸಾಹಿತ್ಯ ಪರಿಷತ್ತ ಸದಸ್ಯ ಮಹೇಶ ಭಂಡಾರಿ, ಸರ್ವೆಶ ಶೆಟ್ಟಿ, ಜನಾರ್ದನ ಶೆಟ್ಟಿ, ಗೋವಿಂದ ಶೆಟ್ಟಿ, ಗಜಾನನ ಶೆಟ್ಟಿ, ಸುಖುಬಾಯಿ ಶೆಟ್ಟಿ ಉಪಸ್ಥಿತಿ ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ, ಕಾರ್ಯದರ್ಶಿ ರವಿ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ.ಶೆಟ್ಟಿ, ಕಾರ್ಯದರ್ಶಿ ಮಹೇಶ ಶೆಟ್ಟಿ, ಉಪಾಧ್ಯಕ್ಷ ಗಜಾನನ ಶೆಟ್ಟಿ ಗಜನಿಕೇರಿ, ಸದಸ್ಯರಾದ ಮಂಜುನಾಥ ಶೆಟ್ಟಿ, ರವಿ ಶೆಟ್ಟಿ, ವೆಂಕ್ರಟಮಣ ಶೆಟ್ಟಿ, ಗಜಾನನ ಶೆಟ್ಟಿ ಮತ್ತಿತರಿದ್ದರು.
ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ 80% ಅಧಿಕ ಅಂಕ ಪಡೆದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯನ್ನು ಕೇಶವ ಶೆಟ್ಟಿ 9483760131, ಹಾಗೂ ಕಾರ್ಯದರ್ಶಿ ರವಿ ಶೆಟ್ಟಿ 6361590678 ಯಾವುದಾದರೂ ನಂಬರ್ ವಾಟ್ಸಪ್ ಮೂಲಕ ಎರಡು ದಿನ ಮುಂಚಿನವಾಗಿ ಸಲ್ಲಿಸಬೇಕು. ಗಾಣಿಗ ಸಮಾಜದವರಾಗಿ ತಾಲೂಕಿನಲ್ಲಿ ವಾಸವಿದ್ದು, ಒಂದರಿAದ ಹತ್ತನೇ ತರಗತಿ ಒಳಗಿನ ವಿದ್ಯಾರ್ಥಿಗಳು ಉಚಿತ ನೋಟಬುಕ್ ಇದೇ ಸಂದರ್ಭದಲ್ಲಿ ವಿತರಿಸಲಾಗುವುದು. ರವಿ ಶೆಟ್ಟಿ ಸಂಘದ ಕಾರ್ಯದರ್ಶಿ
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಹೊನ್ನಾವರ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸುಧೀಶ ನಾಯ್ಕ ಆಯ್ಕೆ
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ. ಜಿ. ನಾಯ್ಕರವರು ಅವಿರೋಧವಾಗಿ ಆಯ್ಕೆ
ಕಡಲ ಅಲೆಗಳ ಆರ್ಭಟಕ್ಕೆ ಸಿಲುಕಿ ದೋಣಿ ಮುಳುಗಡೆ: ಮಂಕಿಯಲ್ಲಿ ಮೀನುಗಾರ ಸಾವು