ಹಿರೇಗುತ್ತಿ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ಅತ್ಯುತ್ತಮ ಸಾಧನೆ ಮಾಡಿದೆ. ಈ ವರ್ಷ ಶಾಲೆಯಿಂದ ಒಟ್ಟು 100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ ಮರು ಮೌಲ್ಯಮಾಪನ ದಲ್ಲಿ ಒಂದು ಹುಡುಗ ಪಾಸಾಗಿ , ಶೇಕಡಾ 100 ಫಲಿತಾಂಶ ದಾಖಲಿಸಿದೆ.


ಶಾಲೆಯ ಶ್ರೇಷ್ಠ ಸಾಧಕರ ಪಟ್ಟಿಯಲ್ಲಿ ಕುಮಾರ ಸೃಜನ್ ಶಂಕರ ಗೌಡ 599 ಅಂಕಗಳು (95.84%) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಕುಮಾರ ಕಾರ್ತಿಕ ವಿಠೋಬ ಗೌಡ 591 ಅಂಕಗಳು (94.56%) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುಮಾರಿ ಭೂಮಿಕಾ ಉದಯ ಹರಿಕಂತ್ರ 577 ಅಂಕಗಳು (92.32%) ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.





ಇನ್ನೂ, ಕುಮಾರಿ ಭವ್ಯ ಪಾಂಡುರAಗ ಗೌಡ 91.36% ಫಲಿತಾಂಶದೊAದಿಗೆ ನಾಲ್ಕನೇ ಸ್ಥಾನ ಪಡೆದಿದ್ದು, ಕುಮಾರಿ ಮಾನ್ವಿ ಮನೋಹರ ಮುಡಂಗಿ 90.04% ಫಲಿತಾಂಶದೊAದಿಗೆ ಐದನೇ ಸ್ಥಾನ ಪಡೆದು ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ.

ಈ ಅತ್ಯುತ್ತಮ ಸಾಧನೆಗಾಗಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷರಾದ ಶ್ರೀಕಾಂತ ಎನ್ ನಾಯಕ, ಕಾರ್ಯದರ್ಶಿ ಮೋಹನ ಬಿ ಕೆರೆಮನೆ, ಹಿರೇಗುತ್ತಿ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಶಾಂತಾ ಎನ್ ನಾಯಕ, ಮಹಾಲಸಾ ಸಿದ್ಧಿವಿನಾಯಕ ಟೆಂಪಲ್ ಟ್ರಸ್ಟ್ ಧರ್ಮದರ್ಶಿ ಸುನೀಲ್ ಪೈ ಹಾಗೂ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯಾಧ್ಯಾಪಕರಾದ ಶ್ರೀ ವಿಶ್ವನಾಥ ಬೇವಿನಕಟ್ಟಿ, ಸಹ ಶಿಕ್ಷಕರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಶಾಲೆಯ ನಿರಂತರ ಶ್ರಮ, ಶಿಕ್ಷಕರ ಸಮರ್ಪಣೆ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.
ವರದಿ : ಎನ್ ರಾಮೂ ಹಿರೇಗುತ್ತಿ

More Stories
ಉತ್ತರ ಕನ್ನಡದ 4 ಸರ್ಕಾರಿ ಪ್ರೌಢಶಾಲೆಗಳಿಗೆ ಸಂಸ್ಕೃತ ಶಿಕ್ಷಕರ ಹುದ್ದೆ ಮಂಜೂರಾತಿ: ಕರ್ನಾಟಕ ಸಂಸ್ಕೃತ ಪರಿಷತ್ ಅಭಿನಂದನೆ
ಹಿರೇಗುತ್ತಿ ಹೈಸ್ಕೂಲ್‌ನಲ್ಲಿ ಶಾಲಾ ಸಂಸತ್ತು ಚುನಾವಣೆ ಹಾಗೂ ಮಂತ್ರಿಮಂಡಲ ರಚನೆ
ಬರ್ಗಿ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ: ನಿತ್ಯ ಯೋಗಕ್ಕೆ ಶಾರದಾ ನಾಯ್ಕ ಕರೆ