ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಶಿಕ್ಷಣ ಪೌಂಡೇಶನ್ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸಿದ ಗೀತಾ ಎಸ್. ಗುಜನಾಳ (ಮದನಭಾವಿ) ಅವರು 2023-2024ನೇ ಸಾಲಿನಲ್ಲಿ ಗ್ರಂಥಪಾಲಕರ ಪ್ರೀತಿಗೆ ಪಾತ್ರರಾಗಿದ್ದು, ಗ್ರಂಥಾಲಯ ಮತ್ತು ಗ್ರಂಥಪಾಲಕರ ಸವಿನೆನಪಿನ ಕಾಣಿಕೆಯಾಗಿಯಾಗಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಮೂರ್ತಿಗಳನ್ನು ವಿವಿಧ ಗ್ರಂಥಾಲಯಗಳಿಗೆ ವಿತರಿಸಿದರು.

ಭಾಂವಿಹಾಳ, ಬೆಳವಡಿ, ದೊಡವಾಡ, ಉಡಿಕೇರಿ, ಗೋವನಕೊಪ್ಪ, ಸಂಪಗಾAವ, ಚಿಕ್ಕಬಾಗೇವಾಡಿ, ಮುರಕೀಭಾಂವಿ, ಆನಿಗೋಳ ಹಾಗೂ ವಕ್ಕುಂದ ಗ್ರಾಮದ ಗ್ರಂಥಾಲಯಗಳಿಗೆ ಮೂರ್ತಿಗಳನ್ನು ವಿತರಿಸಲಾಯಿತು. ಬೈಲಹೊಂಗಲ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಂಜಯ ಜುನ್ನೂರ ಅವರ ಸಹಮತದೊಂದಿಗೆ ವ್ಯವಸ್ಥಾಪಕರಾದ ಜಿ.ಎಸ್. ಬಡೆಮ್ಮಿ, ಯೋಜನಾಧಿಕಾರಿ ಆರ್.ಎಸ್. ಕಡೇಮನಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಕವಿತಾ ಅವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಸಿ.ಎಸ್. ಕಳಸನ್ನವರ ಸ್ವಾಗತ ಭಾಷಣ ಮಾಡಿದರು. ಗಂಗಾAಬಿಕಾ ಕಡಬಿ ಮತ್ತು ಗೀತಾ ಉಪ್ಪಾರ ಅವರು ಪ್ರಾರ್ಥನಾ ಗೀತೆ ಹಾಡಿದರು. ಎಂ.ಎಸ್. ಕೆಂಜೇಡಿಮಠ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಗ್ರಂಥಪಾಲಕರರು ಗೀತಾ ಎಸ್. ಗುಜನಾಳ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ವರದಿ : ಮಹೇಶ ಶರ್ಮಾ
About The Author


More Stories
ಕಾಗವಾಡದಲ್ಲಿ ವಸತಿಗೆ ಅಲೆಯುತ್ತಿರುವ ಮಂಗಳಮುಖಿ: ತಕ್ಷಣದ ಪರಿಹಾರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ
ವಿದ್ಯಾರ್ಥಿ ಗೌತಮ್ ಅನುಮಾನಾಸ್ಪದ ಸಾವು: ಆರೋಪಿಗಳ ಬಂಧನಕ್ಕೆ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಚಿಕ್ಕಬಳ್ಳಾಪುರ ಅಗ್ನಿಶಾಮಕ ಇಲಾಖೆಯ ಸಮಯಪ್ರಜ್ಞೆ: ಆಳವಾದ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ