July 15, 2026

ಮುರ್ಡೇಶ್ವರ: ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮುರ್ಡೇಶ್ವರ: ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜುಲೈ 26ರಂದು ಮುರ್ಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ವಾರ್ಷಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುರ್ಡೇಶ್ವರದ ಆಚಾರ್ಯ ಭವನದಲ್ಲಿ ಭಟ್ಕಳ ಹವ್ಯಕ ವಲಯದ ಪ್ರಮುಖರಾದ ಬಲ್ಸೆ ಕೃಷ್ಣಾನಂದ ಭಟ್ಟ ಅವರು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಬಲ್ಸೆ ಕೃಷ್ಣಾನಂದ ಭಟ್ಟ ಅವರು, “ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ಸಂಘಟನೆಯ ಅಗತ್ಯತೆ ಹೆಚ್ಚಿದೆ. ಹವ್ಯಕ ನೌಕರರು ತಮ್ಮ ಕ್ಷೇಮಾಭಿವೃದ್ಧಿಗೋಸ್ಕರ ಇಂತಹದ್ದೊಂದು ಸಂಘಟನೆಯನ್ನು ಕಟ್ಟಿಕೊಂಡು, ಅತ್ಯಂತ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ. ಸಂಘಟನೆಯ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಸದಾ ಇರಲಿದೆ,” ಎಂದು ಆಶಯ ವ್ಯಕ್ತಪಡಿಸಿದರು.


ಸದಸ್ಯರ ಸಹಕಾರದಿಂದ ಸಂಘಟನೆ ಗಟ್ಟಿಯಾಗಿ ನೆಲೆಯೂರಿದೆ:
ಸಂಘದ ಅಧ್ಯಕ್ಷರಾದ ಮಂಜುನಾಥ ವಿ. ಹೆಗಡೆ ಅವರು ಮಾತನಾಡಿ, “ಹವ್ಯಕ ನೌಕರರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡ ಈ ಸಂಘಟನೆ ಇಂದು ಗಟ್ಟಿಯಾಗಿ ನೆಲೆಯೂರಿದೆ. ಸದಸ್ಯರ ನಿರಂತರ ಸಹಕಾರ ಹಾಗೂ ಸಮಾಜದ ಜನರ ಬೆಂಬಲದೊಂದಿಗೆ ಸಂಘ ಮುನ್ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಬ್ರಾಹ್ಮಣ ನೌಕರರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ,” ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಂಭು ಎನ್. ಹೆಗಡೆ ಅವರು ಮಾತನಾಡಿ, ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆರಂಭದ ದಿನಗಳು ಹಾಗೂ ಸಮಾಜಕ್ಕೆ ಈ ಸಂಘಟನೆಯ ಅಗತ್ಯತೆಯ ಕುರಿತು ಸವಿವರವಾಗಿ ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ಹಿರಿಯರಾದ ಎಂ.ವಿ. ಹೆಗಡೆ, ಜಿ.ವಿ. ಯಾಜಿ, ಗಣೇಶ ಯಾಜಿ, ನಾರಾಯಣ ಪರಂ ಭಟ್ಟ, ಪ್ರಕಾಶ ಭಟ್ಟ, ಕೆ.ಬಿ. ಹೆಗಡೆ, ಶ್ರೀಧರ ಉಡುಪ, ಪಿ.ಎನ್. ಭಟ್ಟ ಹಾಗೂ ಎಂ.ಜಿ. ಹೆಗಡೆ ಉಪಸ್ಥಿತರಿದ್ದರು.

About The Author

error: Content is protected !!