July 25, 2026

ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಜುಲೈ 25 ರಂದು ಜಪ್ತಿ ವಾಹನಗಳ ಸಾರ್ವಜನಿಕ ಹರಾಜು

ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿರುವ ಎರಡು ಪ್ರಮುಖ ವಾಹನಗಳನ್ನು ಘನ ನ್ಯಾಯಾಲಯದ ಆದೇಶದನ್ವಯ ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿದೆ.
ಆಸಕ್ತ ಸಾರ್ವಜನಿಕರು ಈ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರಾಜಿಗಿರುವ ವಾಹನಗಳ ವಿವರಗಳು: ಮಾರುತಿ ಸುಜುಕಿ ಓಮ್ನಿ (Omni) KA-20 / B-8510 2 ಟೊಯೊಟಾ ಇನ್ನೋವಾ (Innova) KL-14 / B-7964

ಹರಾಜು ಪ್ರಕ್ರಿಯೆಯ ವಿವರಗಳು: ದಿನಾಂಕ: ಜುಲೈ 25, 2026. ಸಮಯ: ಬೆಳಿಗ್ಗೆ 10:00 ಗಂಟೆಗೆ. ಸ್ಥಳ: ಮುರ್ಡೇಶ್ವರ ಪೊಲೀಸ್ ಠಾಣೆಯ ಆವರಣ

ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯ ಆವರಣದಲ್ಲಿ ಹಾಜರಿದ್ದು, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

    About The Author

    error: Content is protected !!