July 27, 2026

ಜಾಲಿ ರಸ್ತೆಯಲ್ಲಿ ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ, ಮದ್ಯದ ಬಾಟಲಿಗಳು ವಶ

ಭಟ್ಕಳ: ಪಟ್ಟಣದ ಜಾಲಿ ರಸ್ತೆಯ ಜಟಕೇಶ್ವರ ಅಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಲಿ ಸಂಪನಕೇರಿ ನಿವಾಸಿ ಈಶ್ವರ ಸೋಮಯ್ಯ ಗೊಂಡ (29) ಎಂಬಾತ ಕರ್ನಾಟಕ ರಾಜ್ಯದ ವಿವಿಧ ಮಾದರಿಯ ಮದ್ಯದ ಪ್ಯಾಕೆಟ್‌ಗಳು ಹಾಗೂ ಬಾಟಲಿಗಳನ್ನು ಅಕ್ರಮ ಮಾರಾಟಕ್ಕಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಭಟ್ಕಳ ನಗರ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರ ನೇತೃತ್ವದ ಪೊಲೀಸ್ ತಂಡ ದಿಢೀರ್ ದಾಳಿ ನಡೆಸಿತು.

ದಾಳಿ ಮತ್ತು ಮದ್ಯ ಜಪ್ತಿ:
ದಾಳಿಯ ವೇಳೆ ಆರೋಪಿಯಿಂದ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಪ್ಯಾಕೆಟ್‌ಗಳು ಹಾಗೂ ಬಾಟಲಿಗಳು ಪತ್ತೆಯಾಗಿದ್ದು, ಸುಮಾರು ₹3,685 ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆಯನ್ನು ಕೈಗೊಂಡಿದ್ದಾರೆ.

About The Author

error: Content is protected !!