

ಭಟ್ಕಳ: “ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು” ಎಂದು ರೋಟರಿ ಜಿಲ್ಲೆ ೩೧೭೦ರ ಸಹ ಗವರ್ನರ್ ರೋಟರಿಯನ್ ಜೈವಿಠಲ್ ಕುಬಾಲ್ ಕರೆ ನೀಡಿದರು.

ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ರೋಟರಾಕ್ಟ್ ಕ್ಲಬ್ ಘಟಕದ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಮಿಥಾಲಿ ಮೇಸ್ತ, ಕಾರ್ಯದರ್ಶಿಯಾಗಿ ದೀಕ್ಷಾ ನಾಯ್ಕ್, ಖಜಾಂಚಿಯಾಗಿ ಸುಕನ್ಯಾ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು. “ಪ್ರಪಂಚದ ೧೮೦ ದೇಶಗಳಲ್ಲಿ ಸುಮಾರು ೧೧,೦೦೦ ರೋಟರಾಕ್ಟ್ ಕ್ಲಬ್ಗಳಿದ್ದು, ೨ ಲಕ್ಷಕ್ಕೂ ಹೆಚ್ಚು ಸದಸ್ಯರು ತಮ್ಮ ಸೇವೆಯ ಮೂಲಕ ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ” ಎಂದು ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರೋಟರಾಕ್ಟರ್ ಚಂದನ್ ಕುಬಾಲ್, ರೋಟರಾಕ್ಟ್ನ ಮಹತ್ವ ಹಾಗೂ ಕಾರ್ಯವೈಖರಿಯ ಕುರಿತು ನೂತನ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ರೋಟರಿ ಭಟ್ಕಳದ ಪ್ರಮುಖರಾದ ರೋ. ನಜಿರ್ ಖಾಶಿಂಜೀ, ರೋ. ಶಾಖಿರ್ ಮತ್ತು ರೋ. ಶ್ರೀನಿವಾಸ್ ಪಡಿಯಾರ್ ಅವರು ನೂತನ ತಂಡಕ್ಕೆ ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ಭಟ್ಕಳ ರೋಟರಿ ಅಧ್ಯಕ್ಷರಾದ ರೋ. ಡಾ. ಶ್ರೀನಾಥ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷೆ ನೇಹಾ ಭಂಡಾರಿ ಸ್ವಾಗತಿಸಿ, ೨೦೨೫-೨೬ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಸಿಸಿಲಿಯ ಪಿಂಟೋ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.


ಈ ಸಂದರ್ಭದಲ್ಲಿ ರೋಟರಾಕ್ಟ್ ಮಾರ್ಗದರ್ಶಕರಾದ ಫಣಿಯಪ್ಪಯ್ಯ ಹೆಬ್ಬಾರ್, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ರೋಟರಿ ಮತ್ತು ರೋಟರಾಕ್ಟ್ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author




More Stories
ಅಡಿಕೆ ಕೊಯ್ಯುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶ: 11 ಕೆ.ವಿ. ತಂತಿಗೆ ಏಣಿ ತಾಗಿ ಕೃಷಿಕ ದಾರುಣ ಸಾವು!
ಸರ್ಕಾರಿ ನೌಕರರ ಮನ್ಸೂನ್ ಟ್ರೋಫಿ: ಎನ್ಎಸ್ಸಿ ತಂಡಕ್ಕೆ ಚಾಂಪಿಯನ್ ಪಟ್ಟ!
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.