August 25, 2026

ಹೊನ್ನಾವರ ಅರ್ಬನ್ ಬ್ಯಾಂಕ್‌ನ 107 ನೇ ವಾರ್ಷಿಕ ಮಹಾಸಭೆ: ರೂ. 1.25 ಕೋಟಿ ನಿಕ್ಕಿ ಲಾಭ, ಶೇ. 8 ಡಿವಿಡೆಂಡ್ ಘೋಷಣೆ

ಹೊನ್ನಾವರ: ದಿ ಹೊನ್ನಾವರ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ 107 ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಘವ ವಿಷ್ಣು ಬಾಳೇರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು. 1919 ರಿಂದ ಬ್ಯಾಂಕಿAಗ್ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯು 2025-26 ನೇ ಸಾಲಿನಲ್ಲಿ ರೂ. 1.60 ಕೋಟಿ ನಿರ್ವಹಣಾ ಲಾಭ ಗಳಿಸಿದ್ದು, ತೆರಿಗೆ ಪಾವತಿಯ ನಂತರ ರೂ. 1.25 ಕೋಟಿ ನಿಕ್ಕಿ ಲಾಭ ಗಳಿಸಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ಮಾಹಿತಿ ನೀಡಿದರು. ಬ್ಯಾಂಕ್ ತನ್ನ ಶೇರು ಸದಸ್ಯರಿಗೆ ಶೇ. 8 ರಷ್ಟು ಡಿವಿಡೆಂಡ್ ಘೋಷಿಸಿದ್ದು, ಇದಕ್ಕಾಗಿ ರೂ. 63.02 ಲಕ್ಷ ವ್ಯಯಿಸಲಿದೆ.

ಆರ್ಥಿಕ ಪ್ರಗತಿಯ ಮುಖ್ಯಾಂಶಗಳು:
ವ್ಯವಹಾರ: ಪ್ರಸಕ್ತ ಸಾಲಿನಲ್ಲಿ ಒಟ್ಟೂ ರೂ. 434.95 ಕೋಟಿ ವ್ಯವಹಾರ ನಡೆದಿದೆ.
ಠೇವಣಿ ಮತ್ತು ಸಾಲ: ಬ್ಯಾಂಕಿನ ಠೇವಣಿ ಸಂಗ್ರಹಣೆ ರೂ. 257.82 ಕೋಟಿ ತಲುಪಿದ್ದು, ಸಾಲ-ಮುಂಗಡಗಳು ರೂ. 177.13 ಕೋಟಿ ತಲುಪಿವೆ.
ಬಂಡವಾಳ: ಶೇರು ಬಂಡವಾಳ ಮತ್ತು ಸ್ವಂತ ನಿಧಿಗಳು ರೂ. 31.15 ಕೋಟಿ ಹಾಗೂ ಒಟ್ಟು ದುಡಿಯುವ ಬಂಡವಾಳ ರೂ. 292.03 ಕೋಟಿಗೆ ಏರಿಕೆಯಾಗಿದೆ.
ಸುಭದ್ರತೆ: ಬ್ಯಾಂಕ್ ಕೇಂದ್ರ ಸರ್ಕಾರದ ಸಾಲಪತ್ರಗಳು ಹಾಗೂ ವಿವಿಧ ಬ್ಯಾಂಕುಗಳಲ್ಲಿ ರೂ. 97.65 ಕೋಟಿ ಹೂಡಿಕೆ ಮಾಡಿದೆ. ಬ್ಯಾಂಕಿನ CRAR 12.86 ಇದ್ದು, ಸಾಲ ವಸೂಲಾತಿ ಪ್ರಮಾಣ ಶೇ. 96.07 ರಷ್ಟಿದೆ. ಅಲ್ಲದೆ, ಲೆಕ್ಕಪರಿಶೋಧನೆಯಲ್ಲಿ ‘ಅ’ ವರ್ಗದಲ್ಲಿ ಮುಂದುವರಿದಿದೆ.

ಆಕರ್ಷಕ ಸಾಲ ಯೋಜನೆಗಳು ಹಾಗೂ ಡಿಜಿಟಲ್ ಸೇವೆಗಳು:
ಬ್ಯಾಂಕ್ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬಂಗಾರದ ಆಭರಣ ಸಾಲ (ಪ್ರತಿ ಗ್ರಾಂಗೆ ಗರಿಷ್ಠ ರೂ. 8,500, ಬಡ್ಡಿದರ ಶೇ. 9.00 ರಿಂದ 11.75), ಕಾರು ಸಾಲ (ಶೇ. 8.50) ಹಾಗೂ ವ್ಯವಹಾರ ಉದ್ದಿಮೆ ಸಾಲಗಳನ್ನು (ಶೇ. 9.50) ನೀಡುತ್ತಿದೆ. ಕೋರ್ ಬ್ಯಾಂಕಿAಗ್ ಅಳವಡಿಸಿಕೊಂಡಿರುವ ಬ್ಯಾಂಕ್ ತನ್ನ ಗ್ರಾಹಕರಿಗೆ RTGS/NEFT, CTS ಕ್ಲಿಯರಿಂಗ್, SMS ಅಲರ್ಟ್, ರುಪೇ ಕಾರ್ಡ್, ಎ.ಟಿ.ಎಮ್., ಇ-ಸ್ಟಾಂಪಿAಗ್, ಮೊಬೈಲ್ ಬ್ಯಾಂಕಿAಗ್ ಹಾಗೂ IMPS ಸೇವೆಗಳನ್ನು ನೀಡುತ್ತಿದ್ದು, UPI ಸೇವೆಯನ್ನು ಸದ್ಯದಲ್ಲೇ ಜಾರಿಗೆ ತರಲಿದೆ. ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಹಾಗೂ ಉಚಿತ ಸಭಾಂಗಣ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಬ್ಯಾಂಕ್ ತನ್ನ ಸಾಮಾಜಿಕ ಬದ್ಧತೆಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿದೆ ಎಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

error: Content is protected !!