September 8, 2026

ಪಡಿತರ ಚೀಟಿ ಸರ್ವೇ ತಾಂತ್ರಿಕ ತೊಂದರೆ ನಿವಾರಣೆಗೆ ಆಗ್ರಹ: ಸಾರ್ವಜನಿಕರು ಹಾಗೂ ಸರ್ವೇಯರ್‌ಗಳ ಪರದಾಟ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಪಡಿತರ ಚೀಟಿ (ರೇಷನ್ ಕಾರ್ಡ್) ಸರ್ವೇ ಕಾರ್ಯವು ತಾಂತ್ರಿಕ ಅಡಚಣೆಗಳಿಂದಾಗಿ ತೀವ್ರ ಸಮಸ್ಯೆಗೆ ಸಿಲುಕಿದ್ದು, ಸಾರ್ವಜನಿಕರು ಹಾಗೂ ಸರ್ವೇಯರ್‌ಗಳು ಪರದಾಡುವಂತಾಗಿದೆ.

ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆ: ಸರ್ವೇಯರ್‌ಗಳು ಬಳಸುತ್ತಿರುವ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪದೇ ಪದೇ ತಾಂತ್ರಿಕ ಲೋಪಗಳು ಕಾಣಿಸಿಕೊಳ್ಳುತ್ತಿದ್ದು, ಸರ್ವರ್ ಡೌನ್ ಆಗಿ ದತ್ತಾಂಶಗಳು (Data Upload) ಅಪ್‌ಲೋಡ್ ಆಗದೆ ಕಾರ್ಯ ಕುಂಠಿತಗೊಂಡಿದೆ.

ಫಲಾನುಭವಿಗಳ ತೊಂದರೆ: ಮಾಹಿತಿ ನೀಡಲು ಸಾರ್ವಜನಿಕರು ಸಿದ್ಧರಿದ್ದರೂ, ಆ್ಯಪ್ ದೋಷದಿಂದಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯ ವ್ಯರ್ಥವಾಗಿ ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಬೇಡಿಕೆಗಳು:

ಆಹಾರ ಇಲಾಖೆ ಹಾಗೂ ತಾಂತ್ರಿಕ ವಿಭಾಗವು ತಕ್ಷಣವೇ ಸರ್ವರ್ ಸಾಮರ್ಥ್ಯ ಹೆಚ್ಚಿಸಿ ಆ್ಯಪ್ ದೋಷ ಸರಿಪಡಿಸಬೇಕು.

ತಾಂತ್ರಿಕ ತೊಂದರೆಯಿಂದ ಸರ್ವೇ ವಿಳಂಬವಾಗಿರುವುದರಿಂದ ಸರ್ಕಾರವು ಸರ್ವೇ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ನೀಡಬೇಕು.

      ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತಕ್ಷಣ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಹಾಗೂ ಸರ್ವೇಯರ್‌ಗಳು ಒತ್ತಾಯಿಸಿದ್ದಾರೆ.           ವರದಿ :  ಮಹೇಶ ಶರ್ಮ

      About The Author

      error: Content is protected !!