ಭಟ್ಕಳ: ತಾಲೂಕಿನ ಪಡುಶಿರಾಲಿ (ತಟ್ಟಿಹಕ್ಕಲು) ಸಮೀಪ ಮೇ 24ರಂದು ಚಿಪ್ಪಿಕಲ್ಲು ಆರಿಸುವ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ಬೆಂಗಳೂರಿನ ನಾಮಧಾರಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಪರಿಹಾರ ಧನ ವಿತರಣೆ: ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ತಲಾ ₹27,474 ಮೊತ್ತದ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು. ಒಟ್ಟು ₹3,02,214 ಪರಿಹಾರ ಮೊತ್ತವನ್ನು 9 ಕುಟುಂಬಗಳಿಗೆ (11 ಮೃತರ ಪರವಾಗಿ) ಸಮನಾಗಿ ವಿತರಿಸಲಾಯಿತು.

ಅಸೋಸಿಯೇಷನ್ ಅಧ್ಯಕ್ಷ ಜಿ.ಬಿ. ನಾಯ್ಕ, ಕಾರ್ಯದರ್ಶಿ ಡಾ. ಮಂಗಳ ಬಿ. ನಾಯ್ಕ, ಖಜಾಂಚಿ ವಿನೋದ್ ಎಂ. ನಾಯ್ಕ, ಸಮಿತಿ ಸದಸ್ಯರಾದ ಭೂಪೇಶ್ ಜಿ.ಎನ್., ಸೂರಜ್ ನಾಯ್ಕ, ಮಾಜಿ ಸದಸ್ಯ ಬಾಲಚಂದ್ರ ಬಾಗಿಲವೈದ್ಯ ಹಾಗೂ ಸದಸ್ಯರಾದ ದತ್ತಾತ್ರೇಯ ನಾಯ್ಕ, ಚಂದ್ರಕಾಂತ ನಾಯ್ಕ ಉಪಸ್ಥಿತರಿದ್ದರು.
ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಧಾವಿಸಿದ ನಾಮಧಾರಿ ವೆಲ್ಫೇರ್ ಅಸೋಸಿಯೇಷನ್‌ನ ಮಾನವೀಯ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ