September 20, 2026

ನಾಣಿಕಟ್ಟಾದಲ್ಲಿ ಅ.11ರಂದು ‘ಯಕ್ಷ ವಂದನೆ–ಯಕ್ಷಪರ್ವ’

ಸಿದ್ದಾಪುರ: ಆತ್ಮೀಯ ಕಲಾಭಿಮಾನಿಗಳು, ಕಲಾ ಪೋಷಕರು, ಕಲಾವಿದರು ಹಾಗೂ ಸಂಘಟಕರ ಸಂಪೂರ್ಣ ಸಹಕಾರದೊಂದಿಗೆ ಯಶಸ್ವಿಯಾಗಿ ಸಾಗಿಬರುತ್ತಿರುವ ‘ಯಕ್ಷ ವಂದನೆ–ಯಕ್ಷಪರ್ವ’ ಕಾರ್ಯಕ್ರಮದ 97ನೇ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ನಾಣಿಕಟ್ಟಾ ಯಕ್ಷರಾತ್ರಿ ಹೆಸರಿನಲ್ಲಿ ಆಯೋಜಿಸಲಾಗಿರುವ ಈ ವಿಶೇಷ ಯಕ್ಷಗಾನ ಕಾರ್ಯಕ್ರಮವು ಅಕ್ಟೋಬರ್ 11, 2026ರ ಭಾನುವಾರ ರಾತ್ರಿ 8.01 ಗಂಟೆಗೆ ನಾಣಿಕಟ್ಟಾದಲ್ಲಿ ನಡೆಯಲಿದೆ. ನವರಾತ್ರಿ ಹಬ್ಬದ ಸಂಭ್ರಮದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಳೆದ ಹಲವು ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು ಹಾಗೂ ಕಲಾ ಪೋಷಕರು ನೀಡುತ್ತಿರುವ ಪ್ರೋತ್ಸಾಹವೇ ಕಾರ್ಯಕ್ರಮದ ಯಶಸ್ಸಿಗೆ ಶ್ರೀರಕ್ಷೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 97ನೇ ಕಾರ್ಯಕ್ರಮಕ್ಕೂ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಲಾವಿದರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ.

ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ, ನಾಣಿಕಟ್ಟಾ, ಸಿದ್ದಾಪುರ, ಉತ್ತರ ಕನ್ನಡ ಇವರ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಟರಾಜ ಎಂ. ಹೆಗಡೆ ಹಾಗೂ ಯಕ್ಷಮಿತ್ರ ಬಳಗ ಕಾರ್ಯಕ್ರಮದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನವರಾತ್ರಿ ಹಬ್ಬದ ಸಂಭ್ರಮದೊಂದಿಗೆ ಯಕ್ಷಗಾನ ಕಲೆಯ ವೈಭವವನ್ನು ಸವಿಯಲು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.

About The Author

error: Content is protected !!