ಭಟ್ಕಳ: ಮುರುಡೇಶ್ವರ ಹಿರೇದೋಮಿ ತೂದಳ್ಳಿಯ ಹಿಂದೂ ನಾಮಧಾರಿ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೆಳ್ಳಿ ಮಹೋತ್ಸವದ ಗಣೇಶೋತ್ಸವವು ಐದು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿ, ಅದ್ದೂರಿಯಾಗಿ ಸಂಪನ್ನಗೊಂಡಿತು.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಐದು ದಿನಗಳ ಉತ್ಸವದಲ್ಲಿ ಧಾರ್ಮಿಕ ಸಭೆ, ಭಜನೆ ಹಾಗೂ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಪ್ರತಿದಿನ ಲಘು ಉಪಾಹಾರ ಹಾಗೂ ಮೂರು ದಿನಗಳ ಕಾಲ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ವಿಸರ್ಜನಾ ಮೆರವಣಿಗೆಯ ಆಕರ್ಷಣೆ: ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು, ಯಕ್ಷಗಾನ ಹಾಗೂ ದುರ್ಗಾದೇವಿ, ಮಹಿಷಾಸುರ, ಶಿವ-ಪಾರ್ವತಿ ಮುಂತಾದ ಪೌರಾಣಿಕ ವೇಷಧಾರಿಗಳ ಕುಣಿತ, ಚಂಡೆ ವಾದನ ತಂಡದ ಕಲಾಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಮಹಿಳೆಯರು ಮತ್ತು ಪುರುಷರು ಸಮವಸ್ತ್ರ ಧರಿಸಿ ಭಜನೆ ಹಾಗೂ ನೃತ್ಯದಲ್ಲಿ ಪಾಲ್ಗೊಂಡರು.
ಸೌಹಾರ್ದತೆಯ ಸಂದೇಶ: ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯದವರು ಸಹಕರಿಸಿ ಶಾಂತಿಯುತವಾಗಿ ಮೆರವಣಿಗೆ ಸಾಗಲು ನೆರವಾಗುವ ಮೂಲಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದರು. ಬಳಿಕ ತೂದಳ್ಳಿ ಸಮುದ್ರ ತೀರದಲ್ಲಿ ಮೂರ್ತಿಯನ್ನು ಭಕ್ತಿಭಾವದಿಂದ ವಿಸರ್ಜಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಎಎಸ್‌ಪಿ ರಾನು ಗುಪ್ತ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಜಗದೀಶ ಹಂಚನಾಳ ಹಾಗೂ ಪಿಎಸ್‌ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
About The Author


More Stories
ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ: ಭಟ್ಕಳ ತೆಂಗಿನಗುಂಡಿ ಶಾಲೆಯ ವಿದ್ಯಾರ್ಥಿನಿ ದಿಶಾ ದೇವಾಡಿಗ ದ್ವಿತೀಯ
ಜಾಮ್ನಗರ ಎಕ್ಸ್ಪ್ರೆಸ್ ರೈಲಿನಲ್ಲಿ ₹2.68 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು
ಬಿಗಿ ಪೊಲೀಸ್ ಭದ್ರತೆಯಲ್ಲಿ ಭಟ್ಕಳದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ: ಚೌಥನಿ ಹೊಳೆಯಲ್ಲಿ ಜಲಸ್ತಂಭನ