September 20, 2026

ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ: ಭಟ್ಕಳ ತೆಂಗಿನಗುಂಡಿ ಶಾಲೆಯ ವಿದ್ಯಾರ್ಥಿನಿ ದಿಶಾ ದೇವಾಡಿಗ ದ್ವಿತೀಯ

ಭಟ್ಕಳ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ‘ಬಾಲ ವೈಜ್ಞಾನಿಕ ಪ್ರದರ್ಶನ’ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ ತೆಂಗಿನಗುಂಡಿಯ ವಿದ್ಯಾರ್ಥಿನಿ ದಿಶಾ ದೇವಾಡಿಗ ದ್ವಿತೀಯ ಸ್ಥಾನ ಪಡೆದು ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಸಾಧನೆಗೆ ಹರ್ಷ: ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ವಸಂತ ನಾಯ್ಕ ಅವರ ಸಮರ್ಥ ಮಾರ್ಗದರ್ಶನದಲ್ಲಿ ದಿಶಾ ಈ ಸಾಧನೆ ಮಾಡಿದ್ದು, ಕರಾವಳಿ ಭಾಗದ ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

    ವಿದ್ಯಾರ್ಥಿನಿಯ ಈ ವಿಶೇಷ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (DDPI) ಲತಾ ನಾಯಕ್, ಕುಮಟಾ ಡಯಟ್ ಪ್ರಾಂಶುಪಾಲ ಎನ್.ಆರ್. ಹೆಗಡೆ, ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ (BEO) ವೆಂಕಟೇಶ್ ನಾಯಕ, ಶಾಲಾ ಅಭಿವೃದ್ಧಿ ಸಮಿತಿ (SDMC) ಅಧ್ಯಕ್ಷ ರಾಜು ಗೊಂಡ, ಸಮಿತಿ ಸದಸ್ಯರು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

    About The Author

    error: Content is protected !!