October 22, 2026

ಸ್ನೇಹಾ ವಿಶೇಷ ಮಕ್ಕಳ ಶಾಲೆಯಲ್ಲಿ ಎನ್.ಎಸ್.ಎಸ್ ದಿನಾಚರಣೆ: ಕಾರ್ಯಕ್ರಮಾಧಿಕಾರಿ ಶಾಂತರಾಯ ಗೊಂಡ ಅವರಿಗೆ ಸನ್ಮಾನ

ಭಟ್ಕಳ: ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವತಿಯಿಂದ ‘ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ’ಯ ಅಂಗವಾಗಿ ತಾಲೂಕಿನ ಸ್ನೇಹಾ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ವಯಂಸೇವಕರು ವಿಶೇಷ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರಿಗೆ ತಿನಿಸುಗಳು ಹಾಗೂ ಆಟೋಟದ ಸಲಕರಣೆಗಳನ್ನು ವಿತರಿಸಿದರು.

ಸೇವಾವಿಧಾನ ಹಾಗೂ ಸನ್ಮಾನ:

ವಿಶೇಷ ಮಕ್ಕಳ ಶಿಕ್ಷಕರ ಸೇವೆಯನ್ನು ಗೌರವಿಸಿ ಎನ್.ಎಸ್.ಎಸ್ ಸ್ವಯಂಸೇವಕರು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಹಾಗೂ ನಿಸ್ವಾರ್ಥ ಸೇವಾ ಮನೋಭಾವ ಮೂಡಿಸುತ್ತಿರುವ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಶಾಂತರಾಯ ಗೊಂಡ ಅವರನ್ನು ‘ಸ್ನೇಹಾ ವಿಶೇಷ ಮಕ್ಕಳ ಶಾಲೆ’ಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

      ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹಾಗೂ ಸಹಾನುಭೂತಿಯನ್ನು ಬೆಳೆಸುವಲ್ಲಿ ಈ ಭೇಟಿ ಪ್ರೇರಣಾದಾಯಕವಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

      About The Author

      error: Content is protected !!