ಪೊನ್ನಂಪೇಟೆ: ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹುಲಿಯು ಮತ್ತೊಬ್ಬ ರೈತನ ಜಾನುವಾರನ್ನು ಬಲಿ ಪಡೆದಿದ್ದು, ಸತತ ಹದಿಮೂರೊಂದು ಹಸುಗಳನ್ನು ಕಳೆದುಕೊಂಡ ರೈತ ಕುಟುಂಬ ಕಂಗಾಲಾಗಿದೆ. ಹುಲಿಯ ಉಪಟಳ ಖಂಡಿಸಿ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ವಿರೋಧಿಸಿ ಗ್ರಾಮಸ್ಥರು ಮತ್ತು ರೈತರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಇಟ್ಟೀರ ಪೊನ್ನಣ್ಣ ಅವರಿಗೆ ಸೇರಿದ ಹಸುವಿನ ಮೇಲೆ ಗುರುವಾರ ಹುಲಿ ದಾಳಿ ನಡೆಸಿ ಕೊಂದಿದ್ದು, ಹಸುವಿನ ಅರ್ಧಭಾಗವನ್ನು ತಿಂದುಹಾಕಿದೆ. ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆD ಜಾನುವಾರು ಸಾಕಣೆದಾರರನ್ನು ಆತಂಕಕ್ಕೊಳಪಡಿಸುತ್ತಿರುವ ಹುಲಿಯನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಆಗ್ರಹಿಸಿ, ಹಸುವಿನ ಕಳೇಬರವನ್ನು ಜೀಪಿನಲ್ಲಿ ಇರಿಸಿ ಬೆಳ್ಳೂರು ರಾಜ್ಯ ಹೆದ್ದಾರಿಯಲ್ಲಿ ಸ್ಥಳೀಯರು ಪ್ರತಿಭಟನೆಕ್ಕಿಳಿದರು.
ಅಧಿಕಾರಿಗಳೊಂದಿಗೆ ವಾಗ್ವಾದ: ಸ್ಥಳಕ್ಕೆ ಆಗಮಿಸಿದ ಡಿಎಫ್ಒ ವಿನುತಾ ಚೌವ್ಹಾಣ್ ಅವರ ವರ್ತನೆ ಹಾಗೂ ಪ್ರತಿಭಟನಾಕಾರರೊಂದಿಗೆ ನಡೆದುಕೊಂಡ ರೀತಿಯಿಂದ ಆಕ್ರೋಶಗೊಂಡ ರೈತರು, ಡಿಎಫ್ಒ ಅವರ ವಾಹನವನ್ನೇ ತಡೆದು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಉದ್ಧಟತನ ತೋರಿದ್ದಾರೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹುಲಿಯ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಹಾಗೂ ನರಭಕ್ಷಕ ಹುಲಿಯನ್ನು ಸೆರೆಹಿಡಿಯುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಡಿಎಫ್ಒ ವಿನುತಾ ಚೌವ್ಹಾಣ್ ಹಾಗೂ ಎಸಿಎಫ್ ಅಭಿಲಾಷ್ ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ
About The Author


More Stories
ಜನಮನ ಸೆಳೆದ ಗೋಣಿಕೊಪ್ಪದ ೧೧ನೇ ವರ್ಷದ ಶ್ರೀ ಕಾವೇರಿ ಮಹಿಳಾ ದಸರಾ
ಕೊಡಗಿನ ಪ್ರತಿಷ್ಠಿತ ‘ಗೌರಮ್ಮ ದತ್ತಿ ಪ್ರಶಸ್ತಿ’ಗೆ ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿ ಆಯ್ಕೆ