October 26, 2026

ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಊರಿಗೆ ಕೀರ್ತಿ ತಂದ ಸಾಧಕಿ

ಭಟ್ಕಳ: ಇಲ್ಲಿನ ಜಾಲಿ ಗ್ರಾಮದ ನಿವಾಸಿ ಭಾರತಿ ತಿಮ್ಮಪ್ಪ ನಾಯ್ಕ ಅವರಿಗೆ ಮಂಗಳೂರಿನ ಪ್ರತಿಷ್ಠಿತ ಯೆನೆಪೋಯಾ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವಿಶ್ವವಿದ್ಯಾಲಯವು ವಿಜ್ಞಾನ ವಿಭಾಗದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ಪ್ರಧಾನ ಮಾಡಿದೆ.

ಜಾಲಿ ಗ್ರಾಮದ ತಿಮ್ಮಪ್ಪ ನಾಯ್ಕ ಹಾಗೂ ಲಕ್ಷ್ಮೀ ನಾಯ್ಕ ದಂಪತಿಯ ಪುತ್ರಿಯಾದ ಭಾರತಿ ಅವರು ಯೆನೆಪೋಯಾ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ ಸತತ ಐದು ವರ್ಷಗಳ ಕಾಲ ನಡೆಸಿದ ಸಂಶೋಧನೆಗಾಗಿ ಈ ಉನ್ನತ ಶೈಕ್ಷಣಿಕ ಗೌರವಕ್ಕೆ ಭಾಜನರಾಗಿದ್ದಾರೆ.

ಶಿಲೀಂಧ್ರ ಸೋಂಕಿನ ಕುರಿತು ಸಂಶೋಧನೆ: ಮಾನವರಲ್ಲಿ ಶಿಲೀಂಧ್ರದಿಂದ ಉಂಟಾಗುವ ಸೋಂಕಿಗೆ ಸಂಬಂಧಿಸಿದ “ಮೋಲಿಕ್ಯುಲರ್ ಕ್ಯಾರಕ್ಟರೈಸೇಶನ್ ಆಫ್ ದಿ ಹ್ಯೂಮನ್ ಫಂಗಲ್ ಪ್ಯಾಥೋಜೆನ್ ಮಲಾಸ್ಸೇಜಿಯಾ” (Molecular Characterization of the Human Fungal Pathogen Malassezia) ಎಂಬ ವಿಷಯದ ಕುರಿತು ಇವರು ಮಹಾಪ್ರಬಂಧ ಮಂಡಿಸಿದ್ದರು. ‘Malassezia’ ಶಿಲೀಂಧ್ರದ ಅಣುಮಟ್ಟದ ಗುಣಲಕ್ಷಣಗಳನ್ನು ಆಧರಿಸಿದ ಇವರ ಈ ಸಂಶೋಧನೆಯು ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಯೆನೆಪೋಯಾ ವಿಶ್ವವಿದ್ಯಾಲಯವು ಅಕ್ಟೋಬರ್ ೭ರಂದು ಪ್ರಕಟಿಸಿದ್ದ ಪದವಿಯ ಪ್ರಮಾಣಪತ್ರವನ್ನು ಅಕ್ಟೋಬರ್ ೨೪ರ ಶನಿವಾರದಂದು ಪ್ರದಾನ ಮಾಡಲಾಯಿತು. ಭಾರತಿ ನಾಯ್ಕ ಅವರ ಈ ಸಾಧನೆಯು ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ಅಪಾರ ಸಂತಸ ಮೂಡಿಸಿದ್ದು, ಜಾಲಿಯ ಹೆಮ್ಮೆಯ ಮಗಳಿಗೆ ಸಾರ್ವಜನಿಕ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

About The Author

error: Content is protected !!