November 22, 2026

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಅಹಿಂದ ಬಳಗದಿಂದ ಸನ್ಮಾನ

ಸಂಘಟನೆ ಬಲವರ್ಧನೆ ಕುರಿತು ವಿಸ್ತೃತ ಚರ್ಚೆ: ಅಗತ್ಯ ಸಹಕಾರದ ಭರವಸೆ ನೀಡಿದ ಶಾಸಕರು

ಸೋಮವಾರಪೇಟೆ (ಕೊಡಗು): ಕೊಡಗು ಜಿಲ್ಲಾ ಅಹಿಂದ ಬಳಗದ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಸನ್ಮಾನಿಸಲಾಯಿತು.

ಅಹಿಂದ ಬಳಗದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಅವರ ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾದ ಪದಾಧಿಕಾರಿಗಳ ನಿಯೋಗವು, ಜಿಲ್ಲೆಯಲ್ಲಿ ಅಹಿಂದ ಸಂಘಟನೆಯ ಬೆಳವಣಿಗೆ ಹಾಗೂ ಬಲವರ್ಧನೆಯ ಕುರಿತು ಸುದೀರ್ಘವಾಗಿ ವಿಸ್ತೃತ ಚರ್ಚೆ ನಡೆಸಿತು. ಇದೇ ಸಂದರ್ಭದಲ್ಲಿ ಶಾಸಕರಿಗೆ ಹಾರ-ಶಾಲು ಹೊದಿಸಿ ಆತ್ಮೀಯವಾಗಿ ಗೌರವಿಸಲಾಯಿತು.

ಅಹಿಂದ ಬಳಗದ ಶ್ರಮ ಹಾಗೂ ಸಂಘಟನಾತ್ಮಕ ಕಾರ್ಯಗಳನ್ನು ಶ್ಲಾಘಿಸಿದ ಶಾಸಕ ಡಾ. ಮಂತರ್ ಗೌಡ, ಸಂಘಟನೆಯ ಬೆಳವಣಿಗೆಗೆ ಹಾಗೂ ಅಹಿಂದ ವರ್ಗಗಳ ಏಳಿಗೆಗೆ ಅಗತ್ಯವಿರುವ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಹಿಂದ ಬಳಗದ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

– ವರದಿ: ಪ್ರಿತುನ್ ಪೂವಣ್ಣ, (ಭಾವನಾ ಟಿವಿ)

About The Author

error: Content is protected !!