November 15, 2026

ಕುಶಾಲನಗರದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಕರವೇ ಭಾಗಿ, ಕಣ್ಣುಸೆಳೆದ ಭವ್ಯ ಮೆರವಣಿಗೆ

ಕನ್ನಡಾಂಬೆಯ ವೇಷಧಾರಿ ವಿದ್ಯಾರ್ಥಿಗಳ ಮೆರವಣಿಗೆಗೆ ತಹಶೀಲ್ದಾರ್ ರಮೇಶ್ ಬಾಬು ಚಾಲನೆ

ಕುಶಾಲನಗರ (ಕೊಡಗು): ಕುಶಾಲನಗರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಬೈಚನಹಳ್ಳಿಯ ಶ್ರೀ ಮಾರಿಯಮ್ಮ ದೇವಾಲಯದ ಮುಂಭಾಗದಿಂದ ಆಯೋಜಿಸಲಾಗಿದ್ದ ಶೋಭಾಯಾತ್ರೆಗೆ ತಾಲೂಕು ದಂಡಾಧಿಕಾರಿಗಳಾದ ರಮೇಶ್ ಬಾಬು ಚಾಲನೆ ನೀಡಿದರು. ತೆರೆದ ವಾಹನದಲ್ಲಿ ಕನ್ನಡಾಂಬೆಯ ಪೋಷಾಕು ಧರಿಸಿ, ಭುವನೇಶ್ವರಿಯ ಭಾವಚಿತ್ರ ಹಾಗೂ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗಳ ಮೆರವಣಿಗೆಯೂ ಬಿ.ಎಂ. ರಸ್ತೆಯ ಪ್ರಮುಖ ರಾಜಬೀದಿಯಲ್ಲಿ ಸಾಗಿಬಂದಿತು.

ಬಳಿಕ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಯಿಂದ ಆಕರ್ಷಕ ಪರೇಡ್ ಕವಾಯತು ಪ್ರದರ್ಶನ ಜರುಗಿತು. ತದನಂತರ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ನಡೆದವು.

ಕರವೇ ಪದಾಧಿಕಾರಿಗಳ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕರವೇ ಕೊಡಗು ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ದಾಸ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಜೆ. ಅಣ್ಣಯ್ಯ, ಉಪಾಧ್ಯಕ್ಷ ಎಸ್.ಎಸ್. ಫಯಾಜ್ ಉದ್ದೀನ್, ಖಜಾಂಚಿ ರೋನಾಲ್ಡ್ ಭಾಗವಹಿಸಿದ್ದರು.

ಹಾಗೆಯೇ ಮಹಿಳಾ ಘಟಕದ ಕೊಡಗು ಜಿಲ್ಲಾಧ್ಯಕ್ಷೆ ಜ್ಯೋತಿ ಕುದುಪಜೆ, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷೆ ರೂಪ ಹಾನಗಲ್, ಪ್ರಧಾನ ಕಾರ್ಯದರ್ಶಿ ಗೀತಾ ರಾಜೇಶ್, ಕಾರ್ಯದರ್ಶಿ ಪುಷ್ಪ, ಪ್ರಮುಖರಾದ ಸ್ಟೀಫನ್ ಮ್ಯಾಥೀವ್, ಎಂ.ಆರ್. ಕಣ್ಣನ್, ಕಲ್ಪನಾ, ಅಶ್ವಿನಿ, ಮಂಜುಳಾ ಕೆ.ಆರ್. ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

About The Author

error: Content is protected !!