November 22, 2026

ರಸ್ತೆ ಅಪಘಾತದಿಂದ ಅಂಗಾಂಗ ವೈಫಲ್ಯ: ಸೋಮನಳ್ಳಿಯ ಯುವಕನ ಜೀವ ಉಳಿಸಲು ಸಹಾಯ ಹಸ್ತಕ್ಕೆ ಅನಂತಮೂರ್ತಿ ಹೆಗಡೆ ವಿನಂತಿ

ಬೆಂಗಾಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ೨೩ ವರ್ಷದ ಚಿನ್ಮಯ ಹೆಗಡೆ: ಬಡ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯ

ಶಿರಸಿ: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಲಿವರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬನವಾಸಿ ಸಮೀಪದ ಸೋಮನಳ್ಳಿಯ ಯುವಕ ಚಿನ್ಮಯ ಗುರುನಾಥ ಹೆಗಡೆ ಅವರ ಆರೋಗ್ಯ ಚೇತರಿಕೆಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಧನಸಹಾಯದ ವಿನಂತಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ೨೩ ವರ್ಷದ ಚಿನ್ಮಯ ಹೆಗಡೆ ಅವರಿಗೆ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಅವರ ಲಿವರ್ ಹಾಗೂ ಒಂದು ಕಿಡ್ನಿ ನಿಷ್ಕ್ರಿಯಗೊಂಡಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಸುಮಾರು ೧೫ ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚಾಗಿದೆ.

ಇನ್ನೂ ಚಿಕಿತ್ಸೆ ಮುಂದುವರಿಯುತ್ತಿದ್ದು, ಹೆಚ್ಚಿನ ವೆಚ್ಚಕ್ಕೆ ಸುಮಾರು ೫ ಲಕ್ಷ ರೂಪಾಯಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿನ್ಮಯ ಅವರ ತಂದೆ ಗುರುನಾಥ ಹೆಗಡೆ ಅವರು ಮಗನ ಚಿಕಿತ್ಸಾ ವೆಚ್ಚ ಭರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ನೆರವಿಗೆ ಅನಂತಮೂರ್ತಿ ಹೆಗಡೆ ಕರೆ: ಆರ್ಥಿಕವಾಗಿ ಬಡ ಕುಟುಂಬದ ಯುವಕನ ಪ್ರಾಣ ರಕ್ಷಿಸಲು ಹಾಗೂ ಅವರ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದ ಆರ್ಥಿಕ ನೆರವು ನೀಡಿ ಜೀವ ಉಳಿಸಬೇಕಾಗಿ ಅನಂತಮೂರ್ತಿ ಹೆಗಡೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಹಾಯ ಹಸ್ತ ನೀಡಲು ಬ್ಯಾಂಕ್ ವಿವರ ಹಾಗೂ ಜಿ-ಪೇ ಸಂಖ್ಯೆ: ಖಾತೆದಾರರ ಹೆಸರು: ಗುರುನಾಥ ಶಂಕರನಾರಾಯಣ ಹೆಗಡೆ (Gurunatha Shankaranarayana Hegde) ಫೋನ್ ಪೇ / ಜಿ-ಪೇ ಸಂಖ್ಯೆ (PhonePe/GPay): 9483659824 ಬ್ಯಾಂಕ್: ಯೂನಿಯನ್ ಬ್ಯಾಂಕ್ (Union Bank) ಖಾತೆ ಸಂಖ್ಯೆ (A/c No): 619002120000402 ಐಎಫ್‌ಎಸ್‌ಸಿ ಕೋಡ್ (IFSC Code): UBIN0901164

About The Author

error: Content is protected !!