November 23, 2026

ಭಟ್ಕಳ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಲಿಂಗಪ್ರಸಾದ್ ಅವರಿಗೆ ಗೌರವ ಸನ್ಮಾನ

ಆಯುಷ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಧನ್ವಂತರಿ ಜಯಂತಿ ಆಚರಣೆ

ಭಟ್ಕಳ: ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ನಗರದ ಖ್ಯಾತ ವೈದ್ಯ ಡಾ. ಲಿಂಗಪ್ರಸಾದ್ ಅವರಿಗೆ ಆಯುಷ್ ಫೆಡರೇಶನ್ ಆಫ್ ಇಂಡಿಯಾ (AFI) ಭಟ್ಕಳ ಘಟಕದ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದ AFI ಭಟ್ಕಳ ಘಟಕದ ಅಧ್ಯಕ್ಷ ಡಾ. ಸುನಿಲ್ ಜತ್ತನ್, “ಡಾ. ಲಿಂಗಪ್ರಸಾದ್ ಅವರು ವೈದ್ಯಕೀಯ ಕ್ಷೇತ್ರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಈ ರಾಜ್ಯೋತ್ಸವ ಪ್ರಶಸ್ತಿ ಸೂಕ್ತ ಗೌರವವಾಗಿದೆ” ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಲಿಂಗಪ್ರಸಾದ್, ತಮ್ಮ ಸುದೀರ್ಘ ವೈದ್ಯಕೀಯ ಸೇವೆಯನ್ನು ಗುರುತಿಸಿ ಗೌರವಿಸಿದ ಆಯುಷ್ ಫೆಡರೇಶನ್ ಹಾಗೂ ತಾಲೂಕಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಭಗವಾನ್ ಧನ್ವಂತರಿ ಜಯಂತಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಮತ್ತು ವೈದ್ಯರ ವೃತ್ತಿ ಜೀವನದಲ್ಲಿ ಧನ್ವಂತರಿ ಮಹರ್ಷಿಗಳ ಕೊಡುಗೆ ಹಾಗೂ ಮಹತ್ವವನ್ನು ವೈದ್ಯರು ಸ್ಮರಿಸಿದರು.

AFI ಜಿಲ್ಲಾ ಕಾರ್ಯದರ್ಶಿ ಡಾ. ವಾದಿರಾಜ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ವೈದ್ಯರಾದ ಡಾ. ರಾಘವೇಂದ್ರ ರಾವ್, ಡಾ. ಬಾಲಕೃಷ್ಣ ಭಟ್, ಡಾ. ಶೀಲಾ ಮಡಿ, ಡಾ. ಹರಿಪ್ರಸಾದ್ ಕಿಣಿ, ಡಾ. ಮನೋಜ್ ಆಚಾರ್ಯ, ಡಾ. ನಿರಂಜನ್ ಹೆಬ್ಬಾರ್, ಡಾ. ವಿನಯ ಹೆಬ್ಬಾರ್ ಹಾಗೂ ಡಾ. ಜೈರಾಜ್ ಮೊಗೇರ್ ಉಪಸ್ಥಿತರಿದ್ದರು.

About The Author

error: Content is protected !!