ದೋಹಾ (ಕತಾರ್): ಕತಾರ್ ಪ್ರವಾಸದಲ್ಲಿರುವ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆಯ ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರನ್ನು ಕರ್ನಾಟಕ ಸಂಘ ಕತಾರ್ (KSQ) ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸೌಹಾರ್ದಯುತವಾಗಿ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.
ಕೇಂದ್ರ ಸಚಿವರ ಕತಾರ್ ಭೇಟಿಯ ಗೌರವಾರ್ಥವಾಗಿ, ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ ಅವರು ಆಯೋಜಿಸಿದ್ದ ವಿಶೇಷ ಔತಣಕೂಟದಲ್ಲಿ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ಚಟುವಟಿಕೆಗಳು ಹಾಗೂ ಸಂಘದ ಕಾರ್ಯವೈಖರಿ ಕುರಿತು ಸಚಿವರೊಂದಿಗೆ ಚರ್ಚಿಸಲಾಯಿತು.


More Stories
‘ಕರುನಾಡ ವೈಭವ-2026’ ವೇದಿಕೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಅದ್ದೂರಿ ಗೌರವ ಸನ್ಮಾನ
ಕರ್ನಾಟಕ ಸಂಘ ಕತಾರ್ನಿಂದ 71ನೇ ರಾಜ್ಯೋತ್ಸವ; ‘ಕರುನಾಡ ವೈಭವ-2026’ ವೈಭವೋಪೇತ ಆಚರಣೆ
ದೋಹಾದಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿರುವ ಮಣ್ಣಿನ ಮಗ: ಸುಬ್ರಹ್ಮಣ್ಯ ಹೆಬ್ಬಾಗಿಲು