ಕುಮಟಾ : ಕರ್ನಾಟಕ ಸರ್ಕಾರ, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ಜಿಲ್ಲೆ ಇವರ ಸಹಯೋಗದಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ರಾಜ್ಯ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕೆನರಾ ವೆಲ್ಫೇರ್ ಟ್ರಸ್ಟಿನ ಸೌ|| ಕಮಲಾಬಾಯಿ ಪಿಕೆಳೆ ಹೈಸ್ಕೂಲ್ ಕತಗಾಲ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಇವರ ಸಾಧನೆ ವಿವರ ಕೆಳಗಿನಂತಿದೆ:

ಸೌಮ್ಯ ಬೀರಪ್ಪ ಅಂಬಿಗ ಅವರು ಪೋಲ್ವಾಲ್ಟ್ ಸ್ಪರ್ಧೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದು, ಕಠಿಣ ತರಬೇತಿ ಹಾಗೂ ಪರಿಶ್ರಮದ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 2.30 ಮೀ ಜಿಗಿದು ಪ್ರಥಮ ಸ್ಥಾನದೊಂದಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ನವೆಂಬರ್ 19 ರಿಂದ 23 ರವರೆಗೆ ಮಧ್ಯಪ್ರದೇಶದ ಶ್ರೀಮಂತ್ ಮಾಧವ್ ರಾವ್ ಸೈಂಧಿಯಾ ಖೇಲ್ ಪರಿಸರ್ ಶಿವಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ರಂಜಿತಾ ರಾಮಚಂದ್ರ ನಾಯ್ಕ್ ಮತ್ತು ತೀರ್ಥನಾ ಶಿವ್ಯೂ ಗೌಡ ಅವರು 4*100 ಮೀ. ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಯ ಇತಿಹಾಸದಲ್ಲಿ ಮೊದಲ ಬಂಗಾರದ ಪದಕದ ಸಾಧನೆ ಮಾಡಿದ್ದಾರೆ.

ನಾಗೇಂದ್ರ ಈಶ್ವರ ಗೌಡ ತ್ರಿವಿಧ ಜಿಗಿತದಲ್ಲಿ 5ನೇ ಸ್ಥಾನ ಹಾಗೂ ಅಪೇಕ್ಷಾ ರಾಜು ನಾಯ್ಕ್ ರಿಲೇಯಲ್ಲಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.
ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೃಷ್ಣ ಆರ್. ಗೌಡ ಅವರು ತರಬೇತಿ ನೀಡಿರುತ್ತಾರೆ. ವಿಜೇತ ಕ್ರೀಡಾಪಟುಗಳಿಗೆ ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀ ಎಸ್. ಎಸ್. ಕೊರವರ, ಹಿರಿಯ ಶಿಕ್ಷಕರಾದ ಶ್ರೀ ಅಶೋಕ ಭಟ್ ಹಾಗೂ ಸಹೋದರ ಸಿಬ್ಬಂದಿ ವರ್ಗದವರು ಮತ್ತು ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

More Stories
ಬರ್ಗಿ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡ ರಾಜ್ಯಮಟ್ಟದ ‘ವಿವೇಕ ವಿದ್ಯಾರ್ಥಿ ಪರೀಕ್ಷೆ’
ವರ್ಗಾವಣೆಗೊಂಡ ಪತ್ರಾಂಕಿತ ವ್ಯವಸ್ಥಾಪಕ ದೇವದಾಸ ಜಾದವರಿಗೆ ಬೋಧಕರ ಸಂಘದಿಂದ ಆತ್ಮೀಯ ಸನ್ಮಾನ
ಮಕ್ಕಳ ಪ್ರೀತಿಯ ನೆಹರೂಜಿ ಅನನ್ಯ ವ್ಯಕ್ತಿತ್ವದ ನಾಯಕ: ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕ