November 22, 2026

ವರ್ಗಾವಣೆಗೊಂಡ ಪತ್ರಾಂಕಿತ ವ್ಯವಸ್ಥಾಪಕ ದೇವದಾಸ ಜಾದವರಿಗೆ ಬೋಧಕರ ಸಂಘದಿಂದ ಆತ್ಮೀಯ ಸನ್ಮಾನ

ಅವಿಸ್ಮರಣೀಯ ಸೇವೆ ಸ್ಮರಿಸಿ ‘ಭಾವನಿಧಿ’ ಬಿರುದಿನೊಂದಿಗೆ ಗೌರವ; ಬಿಇಒ ಉದಯ ನಾಯ್ಕ ಸೇರಿ ಗಣ್ಯರು ಭಾಗಿ

ಕುಮಟಾ (ಉತ್ತರ ಕನ್ನಡ): ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಾರ್ಯಾಲಯದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಉತ್ತಮ ಸೇವೆ ಸಲ್ಲಿಸಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ ಬಿಇಒ ಕಚೇರಿಗೆ ವರ್ಗಾವಣೆಗೊಂಡ ದೇವದಾಸ ಈರಪ್ಪ ಜಾದವ್ ಅವರನ್ನು ಕರ್ನಾಟಕ ರಾಜ್ಯ ಬೋಧಕರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಕುಮಟಾದಲ್ಲಿ ಸೇವಾವಧಿಯಲ್ಲಿ ಅವರು ಸಲ್ಲಿಸಿದ ಅವಿಸ್ಮರಣೀಯ ಹಾಗೂ ಜನಸ್ನೇಹಿ ಆಡಳಿತಾತ್ಮಕ ಸೇವೆಯನ್ನು ಸ್ಮರಿಸಿ, ಸಂಘದ ವತಿಯಿಂದ ಅವರಿಗೆ ‘ಭಾವನಿಧಿ’ ಎಂಬ ವಿಶೇಷ ಉಪಾಧಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ, ಪ್ರಭಾರ ವ್ಯವಸ್ಥಾಪಕ ಪ್ರಕಾಶ ಕಬೀರದಾಸ ರಾಠೋಡ್, ಅಧೀಕ್ಷಕ ರಾಘವೇಂದ್ರ ನಾಯ್ಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ್ ಬರ್ಗಿ, ಸಂಚಾಲಕ ವಿಜಯಕುಮಾರ್, ಕೋಶಾಧ್ಯಕ್ಷ ಶಿವಚಂದ್ರ, ಜಯಂತ ಹಾಗೂ ಕಿರಣ್ ಶೂರ್ ಸೇರಿದಂತೆ ಸಿಬ್ಬಂದಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!