ಭಟ್ಕಳ: ತಲಾಂದ ರಸ್ತೆಯ ಹೊಸಮಠ ಗದ್ದೆ ಸಮೀಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಬೈಕ್ ಏಕಾಏಕಿ ಕಾಡುಹಂದಿ ರಸ್ತೆ ದಾಟಲು ಬಂದ ಹಿನ್ನೆಲೆಯಲ್ಲಿ ಸ್ಕಿಡ್ ಆಗಿ ಉರುಳಿದ ಘಟನೆ ನಡೆದಿದೆ. ಬೈಕ್ ಸವಾರ ಮಹೇಶ ತಂದೆ ವೆಂಕಟೇಶ ಗೊಂಡ ಮತ್ತು ಹಿಂಬದಿ ಸವಾರ ರಿತೇಶ ತಂದೆ ಬಡಿಯಾ ಗೊಂಡ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಹಿಂಬದಿ ಸವಾರ ರಿತೇಶ ಅವರಿಗೆ ತಲೆಯ ಹಿಂಭಾಗ, ಬಲಗಣ್ಣು, ಬಲಗೈ ಹಾಗೂ ಬಲಗಾಲಿಗೆ ಗಾಯಗಳಾಗಿದ್ದು, ಬೈಕ್ ಸವಾರ ಮಹೇಶ ಅವರಿಗೆ ತಲೆಯ ಹಿಂಭಾಗ, ಬಲಗೈ ಮೊಣಕೈ ಭಾಗ ಹಾಗೂ ಎರಡೂ ಕಾಲಿನ ಪಾದಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಯೋಗೇಶ ತಂದೆ ಕುಪ್ಪಯ್ಯ ಗೊಂಡ ಅವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಮೋಟಾರ್ಸೈಕಲ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ